ತೀರ್ಥಹಳ್ಳಿಯಲ್ಲಿದೆ ಖತರ್ನಾಕ್ ಕಳ್ಳರ ಗ್ಯಾಂಗ್ - ಒಂಟಿ ಮನೆಯೇ ಟಾರ್ಗೆಟ್!? - ಹುಣಸವಳ್ಳಿಯಲ್ಲಿ ಕಳ್ಳತನ thift

ತೀರ್ಥಹಳ್ಳಿಯಲ್ಲಿದೆ ಖತರ್ನಾಕ್ ಕಳ್ಳರ ಗ್ಯಾಂಗ್ - ಒಂಟಿ ಮನೆಯೇ ಟಾರ್ಗೆಟ್!? - ಹುಣಸವಳ್ಳಿಯಲ್ಲಿ ಕಳ್ಳತನ 
ತೀರ್ಥಹಳ್ಳಿ : ತಾಲೂಕಿನಲ್ಲಿ ಅನಾಥಶ್ರಮ ನಡೆಸುತ್ತಿದ್ದೇವೆ ಎಂಬುದಾಗಿ ಹೇಳಿ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಅದರಂತೆ ಹುಣಸವಳ್ಳಿಯ ಮನೆಯೊಂದರಲ್ಲಿ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ.

ಅನಾಥಾಶ್ರಮ ನಡೆಸುವುದಾಗಿ ಹೇಳಿ, ಹಳ್ಳಿ ಹಳ್ಳಿಗಳ ಮನೆಗಳಿಗೆ ಹೋಗುತ್ತಿರುವ ಒಂದು ತಂಡ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ನಡೆಸುತ್ತಿರುವ ಬಗ್ಗೆ ವರದಿ ಲಭ್ಯವಾಗಿದೆ. ಈಗಾಗಲೇ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸವಳ್ಳಿಯಲ್ಲಿ ಕಳ್ಳತನ ನಡೆದಿದ್ದು ಹೊರಭಾಗದಿಂದ ಬಂದಂತಹ ಯಾರೇ ಆಗಲಿ ಅವರ ಬಗ್ಗೆ ಎಚ್ಚರಿಕೆಯಿಂದ ಇರಲು ಪೊಲೀಸ್ ಇಲಾಖೆ ತಿಳಿಸಿದೆ.

ಹೊರ ಭಾಗದಿಂದ ಅನುಮಾನಸ್ಪದವಾಗಿ ಯಾರೇ ಕಂಡುಬಂದರೂ ಸಹ ತೀರ್ಥಹಳ್ಳಿ ಪೊಲೀಸ್ ಠಾಣೆ ಅಥವಾ 112 ಗೆ ತಿಳಿಸಲು ಕೋರಿದೆ..
Previous Post Next Post