ತೀರ್ಥಹಳ್ಳಿಯ ಸರ್ಕಾರಿ ಶಾಲೆಯಲ್ಲೊಬ್ಬರು ಸೂಪರ್ ಮಾಸ್ಟರ್..!
ತೀರ್ಥಹಳ್ಳಿ : ಸರ್ಕಾರಿ ಶಾಲೆ ಎಂದರೆ ಸಾಕು ಅಸಡ್ಡೆ ತೋರುವವರೇ ಜಾಸ್ತಿ, ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಸಿಗಲ್ಲ ಎಂಬ ಮಾತು, ಆದರೆ ಹಿರೇಗದ್ದೆ ಸರ್ಕಾರಿ ಶಾಲೆಯಲ್ಲಿ ಸೂಪರ್ ಮಾಸ್ಟರ್ ಇದ್ದಾರೆ ಎಂದರೆ ತಪ್ಪಾಗಲಾರದು..
ಹೌದು ಆರಗ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಿರೇಗದ್ದೆ
ಪಿ. ಎಂ ಶ್ರೀ ಸರ್ಕಾರಿ ಶಾಲೆಯಲ್ಲಿ ದೇವೇಂದ್ರ ಕುಮಾರ್ ಎಂಬ ಶಿಕ್ಷಕರಿದ್ದು ಇಂಗ್ಲಿಷ್ ಪಾಠವನ್ನು ಮಾಡುತ್ತಾರೆ. ಈ ಶಾಲೆಯಲ್ಲಿ ಕಳೆದ ಹತ್ತು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲತಃ ಕೊಪ್ಪ ಸಮೀಪದ ಜಯಪುರದವರಾದ ಇವರು ನಾಲ್ಕು ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇವರು ಮಾಡಿರುವ ಸಾಧನೆಗೆ ಸ್ಪೆಷಲ್ ಶಿಕ್ಷಕ ಎಂದರೂ ತಪ್ಪಾಗಲ್ಲ..
(ರಾಜ್ಯಶಾಸ್ತ್ರ, ಅರ್ಥಶಾಸ್ತ್ರ . ಇತಿಹಾಸ, ಇಂಗ್ಲಿಷ್ ) ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿರುವ ಇವರು ರಾಜ್ಯಶಾಸ್ತ್ರ ವಿಷಯದಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಬಿ. ಎಡ್, ಕೆ. ಸೆಟ್, ನೆಟ್ ಹಾಗೂ ಎಮ್. ಲಿಬ್ (
Master of information science and library science) ಸಹ ಅಧ್ಯಯನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುತ್ತಾರೆ .
ತಾವು ಅಧ್ಯಯನ ಮಾಡಿರುವುದನ್ನು ಈಗ ವಿದ್ಯಾರ್ಥಿಗಳಿಗೆ ಕಲಿಸಲು ಮುಂದಾಗಿರುವ ಇವರಿಗೆ ಜೀವನದಲ್ಲಿ ಇನ್ನಷ್ಟು ಶುಭವಾಗಲಿ ಎಂದು ಶಿವಮೊಗ್ಗ ಸುದ್ದಿ ಹಾರೈಸುತ್ತದೆ.
Tags:
ತೀರ್ಥಹಳ್ಳಿ ಸುದ್ದಿ