ಸಹ್ಯಾದ್ರಿ ಶಾಲಾ ಆವರಣದಲ್ಲಿ ವಿಜೃಂಭಣೆಯ ಮಕ್ಕಳ ಸಂತೆ ಹಾಗೂ ಆಹಾರ ಮೇಳ
ತೀರ್ಥಹಳ್ಳಿ : ಮಕ್ಕಳಲ್ಲಿ ಪಠ್ಯ ಚಟುವಟಿಕೆ ಮಾತ್ರವಲ್ಲದೆ, ಜೀವನಾನುಭವ, ಜೀವನ ಕೌಶಲ್ಯ, ವ್ಯಾಪಾರ, ಹಣಕಾಸು ಹಾಗೂ ದೈನಂದಿನ ವ್ಯವಹಾರದ ಬಗ್ಗೆ ಅರಿವು ಮೂಡಿಸುವ ದೃಷ್ಠಿಯಿಂದ ತೀರ್ಥಹಳ್ಳಿ, ಕುಶಾವತಿಯ ಸಹ್ಯಾದ್ರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಸಹ್ಯಾದ್ರಿ ಶಾಲಾ ಆವರಣದಲ್ಲಿ ಮಕ್ಕಳ ಸಂತೆ ಹಾಗೂ ಆಹಾರ ಮೇಳವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಬೆಳೆದ ವಿವಿಧ ತರಕಾರಿಗಳು ತಾವೇ ಸ್ವತಃ ತಯಾರಿಸಿದ ಆಹಾರ ಪದಾರ್ಥಗಳು ಹಾಗೂ ವಿಭಿನ್ನ ಖಾದ್ಯಗಳನ್ನು ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಲಾಯಿತು. ಈ ವಿಭಿನ್ನ ಕಾರ್ಯಕ್ರಮದ ಉದ್ಘಾಟನೆಯನ್ನು ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ರತ್ನಾಕರಶೆಟ್ಟಿ ಇವರು ನೆರವೇರಿಸಿದರು. ಹಾಗೂ ಇವರೊಂದಿಗೆ ಕೌನ್ಸಿಲರ್ ಜ್ಯೋತಿಗಣೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರಿರಾಜ್ , ಸರ್ಕಲ್ ಇನ್ಸ್ಪೆಕ್ಟರ್‌ರವರಾದ ಇಮ್ರಾನ್ ಬೇಗ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಕೂಳೂರು ಕೃಷ್ಣಮೂರ್ತಿ, ಉಪಾಧ್ಯಕ್ಷರಾದ ಎಸ್ ವಿ ಲೋಕೇಶ್ ಸರಳ, ಕಾರ್ಯದರ್ಶಿಗಳಾದ ಆದರ್ಶ ಹೊಸೂರು, ಖಜಾಂಚಿಯವರಾದ ಶಶಿಧರ್ ಎಂ ಆರ್, ಸಹಕಾರ್ಯದರ್ಶಿಗಳಾದ ಸುನಿಲ್‌ಗೌಡ, ನಿರ್ದೇಶಕರುಗಳಾದ ಬಾಳೇಹಳ್ಳಿ ಪ್ರಭಾಕರ್, ಸುಜಿನಿಗೌಡ, ವೀರೇಂದ್ರ ಕೆ.ಸಿ, ಸುಧೀರ್ ಬಿ.ವಿ, ಸಂದೀಪ್ ಕುಡುಮಲ್ಲಿಗೆ, ಧನ್ಯ ಅಶ್ವಲ್ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಜಿ.ಎನ್ ಪ್ರಕಾಶ್, ಸಹ್ಯಾದ್ರಿ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಆಗ್ನೆಸ್ ಮೆಂಡೋನ್ಸ, ಸಹ ಶಿಕ್ಷಕರುಗಳು, ಬೋದಕೇತರ ವರ್ಗದವರು, ಪೋಷಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಇವರುಗಳು ಮಕ್ಕಳ ಸಂತೆಯಲ್ಲಿ ತರಕಾರಿ ಇತರೆ ಖಾದ್ಯಗಳನ್ನು ಖರೀದಿಸಿ ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
Tags:
ಸಹ್ಯಾದ್ರಿ ಸಂಸ್ಥೆ