ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದಾಖಲೆ ಬರೆದ ತೀರ್ಥಹಳ್ಳಿ ಕುವರಿ tth

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದಾಖಲೆ ಬರೆದ ತೀರ್ಥಹಳ್ಳಿ ಕುವರಿ 

ರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಧ್ವಜ ಹಾರಿಸಿದ ಸಂಹಿತಾ ಉಡುಪ

ತೀರ್ಥಹಳ್ಳಿ : ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ್ ಫೆಡರೆಷನ್ (NYFS) ಇಂಡಿಯಾ ವತಿಯಿಂದ ನಡೆದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತೀರ್ಥಹಳ್ಳಿಯ  ಕುವರಿ ಸಂಹಿತಾ ಉಡುಪ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಧ್ವಜವನ್ನು ರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ಸಾಧನೆಗೈದಿದ್ದಾರೆ.  

ಅಸ್ಸಾಂ ನಲ್ಲಿ ನಡೆದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದು ರಾಜ್ಯಕ್ಕೆ ಹಾಗೂ ತೀರ್ಥಹಳ್ಳಿಯ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಅಸ್ಸಾಂ ನಲ್ಲಿ ಭಾಗವಹಿಸಿದ ದೇಶದ ಎಲ್ಲಾ ರಾಜ್ಯಗಳ ಯೋಗಾಪಟುಗಳೊಂದಿಗೆ ಸ್ಪರ್ಧಿಸಿ ಗೆಲ್ಲುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ.

ಸಂಹಿತ ಉಡುಪ ತೀರ್ಥಹಳ್ಳಿಯ ನಟೇಶ್ ಮತ್ತು ಶ್ರೀಪ್ರದ ದಂಪತಿಗಳ ಪುತ್ರಿಯಾಗಿದ್ದು ಪ್ರಸ್ತುತ ಇವರು ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ವಾಗ್ದೇವಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.
ರಾಷ್ಟ್ರ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಲಿ ಎಂದು ಶಿವಮೊಗ್ಗ ಸುದ್ದಿ ತಂಡದಿಂದ ಹಾರೈಸುತ್ತೇವೆ.


Previous Post Next Post