ಸರ್ಕಾರಿ ಶಾಲೆ ಶಿಕ್ಷಕನ ಕಿತಾಪತಿ - ದಾಖಲಾಯ್ತು ಪ್ರಕರಣ..! Tuduru

ಸರ್ಕಾರಿ ಶಾಲೆ ಶಿಕ್ಷಕನ ಕಿತಾಪತಿ - ದಾಖಲಾಯ್ತು ಪ್ರಕರಣ..!

ತೀರ್ಥಹಳ್ಳಿ : ತಾಲೂಕಿನ ತೂದೂರು ಪ್ರೌಢಶಾಲೆಯ ಶಿಕ್ಷಕನ ಮೇಲೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ. ಶಾಲೆಯಲ್ಲಿ ಪಾಠ ಮಾಡುವ ಬದಲಾಗಿ ಏನೋ ಕಿತಾಪತಿ ಮಾಡಲು ಹೋಗಿ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆ ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾದಗಿನಿಂದ ಶಿಕ್ಷಕ ಕಣ್ಮರೆ ಆಗಿ ಕುಳಿತಿದ್ದು ಶಾಲೆಗೂ ಆಗಮಿಸಿಲ್ಲ ಎಂದು ತಿಳಿದುಬಂದಿದೆ. ಇಂತಹ ಶಿಕ್ಷಕನನ್ನು ಅಮಾನತು ಮಾಡಬೇಕೆಂಬ ಕೂಗು ಕೇಳಿ ಬರುತ್ತಿದ್ದು ಈ ಬಗ್ಗೆ ಸಹ ಹಲವಾರು ವಿಚಾರಗಳು ಚರ್ಚೆ ಆಗುತ್ತಿದೆ. ಆತನನ್ನು ಉಳಿಸಿಕೊಳ್ಳಲು ಡೀಲ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಪಷ್ಟವಾಗಿ ಮಾಹಿತಿ ನೀಡಬೇಕಿದೆ..
Previous Post Next Post