ತೀರ್ಥಹಳ್ಳಿ ತಾಲೂಕಿನಲ್ಲಿ ಬಗೆಹರಿಯದ ಮರಳು ಮಾಫಿಯ..! tth

ತೀರ್ಥಹಳ್ಳಿ ತಾಲೂಕಿನಲ್ಲಿ ಬಗೆಹರಿಯದ ಮರಳು ಮಾಫಿಯ..!
ತೀರ್ಥಹಳ್ಳಿ : ಕೆಲವು ವರ್ಷಗಳಿಂದ ತೀರ್ಥಹಳ್ಳಿ ತಾಲೂಕಿನಲ್ಲಿ   ಕಲ್ಲು, ಮರಳು,ಬಂಡೆ ಮತ್ತು ಮಣ್ಣಿನ ಮಾಫಿಯ ಎಗ್ಗಿಲ್ಲದೇ ನಡೆಯುತ್ತಿದೆ.. ವರ್ಷವೊಂದರಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತಿರುವ ಈ ಮಾಫಿಯಗಳಲ್ಲಿ ಅಧಿಕಾರಿಗಳೇ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ತೀರ್ಥಹಳ್ಳಿಯ ಕುಶಾವತಿ ಹಳ್ಳ, ಶಿರುಪತಿ, ನರಟೂರು, ದಬ್ಬಣಗದ್ದೆ, ಆರಗ, ಪೀರನಗುಡ್ಡೆ, ಹಿರೇಸರ, ಆಂದಿನಿ, ಬಗ್ಗುಡುಗೆ, ಅರೇಹಳ್ಳಿ, ಹೆದ್ದೂರು ಭಾಗದಲ್ಲಿ ನೂರಾರು ಪಿಕಪ್ ವಾಹನಗಳು ರಾತ್ರಿ ಹಗಲು  ಹಳ್ಳ ಮತ್ತು ನದಿಗಳಿಂದ  ಜೆಸಿಬಿ ಯಂತ್ರಗಳಿಂದ ಮರಳನ್ನು  ತೆಗಿತಿದ್ದಾರೆ. ದಿನವೊಂದಕ್ಕೆ ಲಕ್ಷಾಂತರ ರೂ ವಹಿವಾಟು ನಡೆಯುತ್ತಿದೆ. 

ಎಗ್ಗಿಲ್ಲದೆ ಅಕ್ರಮವಾಗಿ ಮರಳು ಮತ್ತು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಗಣಿ, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಎದುರೇ ಘಟನೆ ನಡೆದರು ಮೌನ ವಹಿಸಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. . ಅದರಲ್ಲೂ ಕೆಲವು  ಅಧಿಕಾರಿಗಳು  ಈ ಬ್ರಹ್ಮಾಂಡ ಮಾಫಿಯಾದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಆಗುಂಬೆ ಹೋಬಳಿಯ ಅಂದಿನಿ ಗ್ರಾಮದಲ್ಲಿ ಮಾಲತಿ ನದಿಯಿಂದ ರಾಜಾರೋಷವಾಗಿ ನೂರಾರು ಲಾರಿ ಮರಳನ್ನು ತೆಗೆಯಲಾಗುತ್ತಿದೆ.  ಇತ್ತೀಚಿಗೆ ಮರಳು ಮಾಫಿಯಾ  ಹಗಲು ಹೊತ್ತು ಯಾರ ಭಯ,ಭೀತಿ ಇಲ್ಲದೆ ನಡೆಯುತ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ತೀರ್ಥಹಳ್ಳಿ ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಸೂಕ್ತ ಎಂಬ ಮಾತು ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ..

Previous Post Next Post