ನೀರು ಹಾಕದೆ ಕಟ್ಟಡ ಕಟ್ಟುತ್ತಿರುವ ಖತರ್ನಾಕ್ ಇಂಜಿನಿಯರ್..!
ತೀರ್ಥಹಳ್ಳಿ : ಶಾಸಕರಾದ ಆರಗ ಜ್ಞಾನೇಂದ್ರ ಅವರು ದತ್ತು ತೆಗೆದುಕೊಂಡು ಒತ್ತು ನೀಡದೆ ಇರುವಂತಹ ಸೀಬಿನಕೆರೆ ಸರ್ಕಾರಿ ಶಾಲೆಗೆ ಪಟ್ಟಣ ಪಂಚಾಯಿತಿ ವತಿಯಿಂದ ಆರುವರೇ ಲಕ್ಷ ವೆಚ್ಚದಲ್ಲಿ ಮಕ್ಕಳಿಗೆ ಶೌಚಾಲಯ ಕಟ್ಟುತ್ತಿದ್ದು ಇಲ್ಲಿಯವರೆಗೆ ಯಾವುದೇ ರೀತಿ ನೀರು ಹಾಕದೆ ಕ್ಯೂರಿಂಗ್ ಮಾಡದೇ ಕಟ್ಟಡ ಕಟ್ಟಲಾಗುತ್ತಿದೆ.. ಮಕ್ಕಳಿಗಾಗಿ ಮಾಡುವ ಕೆಲಸಕ್ಕೂ ಕೂಡ ಇಂತಹ ಬೇಜವಾಬ್ದಾರಿ ವರ್ತನೆ ಮಾಡುವ ಅಧಿಕಾರಿಗಳ ಅವಶ್ಯಕತೆ ಇದೆಯೇ? ಎಂಬ ಅನುಮಾನ ಮೂಡಿದೆ.
ತೀರ್ಥಹಳ್ಳಿಯಲ್ಲಿ ಹಲವು ಕಾಮಗಾರಿಗಳು ತಲೆ ಬುಡ ಇಲ್ಲದಂತೆ ಆಗಿದ್ದು ಈಗ ಸರ್ಕಾರಿ ಶಾಲೆಯ ಶೌಚಾಲಯದ ಕಥೆ ಕೂಡ ಹಾಗೆ ಆಗಿದೆ. ವಿಷಯ ತಿಳಿದು ಮಾಧ್ಯಮದವರು ಪ್ರೆಶ್ನೆ ಮಾಡಿದ್ದಕ್ಕೆ ಈಗ ಪುನಃ ಕಟ್ಟಡವನ್ನು ಕೆಡಗಿ ಹಾಕಲಾಗುತ್ತಿದೆ. ಒಟ್ಟಿನಲ್ಲಿ ಹಣ ಮಾಡುವ ಆಸೆಗೆ ಯಾರದ್ದೇ ಹೆಣ ಬಿದ್ದರು ಸಹ ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಗೆ ಏನಾಗಬೇಕಿದೆ? ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ