ಆಂದಿನಿ ಕ್ವಾರೆಗೆ ಬಿತ್ತು ಟ್ರಂಚ್ - ಸ್ಥಳಕ್ಕೆ ಅಧಿಕಾರಿಗಳ ಭೇಟಿ..! Shivamogga suddi impact

ಆಂದಿನಿ ಕ್ವಾರೆಗೆ ಬಿತ್ತು ಟ್ರಂಚ್ - ಸ್ಥಳಕ್ಕೆ ಅಧಿಕಾರಿಗಳ ಭೇಟಿ..!

ಶಿವಮೊಗ್ಗ ಸುದ್ದಿ ಫಲಶ್ರುತಿ


ತೀರ್ಥಹಳ್ಳಿ : ಆಗುಂಬೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಆಂದಿನಿ ಕ್ವಾರೆಯಲ್ಲಿ ಎಗ್ಗಿಲ್ಲದೇ ಮರಳು ಮಾಫಿಯ ನಡೆಯುತ್ತಿದೆ ಎಂಬ ವಿಚಾರವಾಗಿ ಶಿವಮೊಗ್ಗ ಸುದ್ದಿ ವರದಿ ಬಿತ್ತರ ಮಾಡಿತ್ತು. ವರದಿ ನಂತರ ಸ್ಥಳಕ್ಕೆ ಅಧಿಕಾರಿಗಳ ಭೇಟಿ ನೀಡಿ ಆಂದಿನಿ ಕ್ವಾರೆಗೆ ಟ್ರಂಚ್  ಹೊಡೆಸಿದ್ದಾರೆ.

ಅಷ್ಟೇ ಅಲ್ಲದೆ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ಸಹ ದಾಖಲಾಗಿದ್ದುರಾಹುಲ್ ಎಂಬಾತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಹಾಗೂ ಮರಳು ತುಂಬಿದ್ದ ಆರು ಪಿಕಪ್ ವಾಹನ ವಶಕ್ಕೆ ಪಡೆಯಲಾಗಿದೆ. ಇನ್ನುಳಿದಂತೆ ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ 2 ಪಿಕಪ್ ವಾಹನ ಮತ್ತು 11 ಸಾವಿರ ದಂಡ, 1 ಟ್ರ್ಯಾಕ್ಟರ್ ಮತ್ತು ನಾಲ್ಕು ಸಾವಿರ ದಂಡ, 1 ಲಾರಿ ಮತ್ತು ಹತ್ತು ಸಾವಿರ ದಂಡ ಹಾಕಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆದರೂ ತೀರ್ಥಹಳ್ಳಿ ತಾಲೂಕಿನಲ್ಲಿ ಮರಳು ಹಾಗೂ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ..



Previous Post Next Post