ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಿಂದರಲ್ಲಿ ಕಸದ ರಾಶಿ - ಕಣ್ಮುಚ್ಚಿ ಕುಳಿತ ಆಡಳಿತ
ತೀರ್ಥಹಳ್ಳಿ : ತಾಲೂಕಿನ ಅತೀ ದೊಡ್ಡ ಗ್ರಾಮಪಂಚಾಯಿತಿಯಾಗಿರುವ ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಿಂದರಲ್ಲಿ ಕಸದ ರಾಶಿ ಕಾಣಿಸುತ್ತಿದೆ. ಕಸದ ತೊಟ್ಟಿಯಲ್ಲಿ ತುಂಬಿ ಕಸ ತುಂಬಿ ತುಳುಕುತ್ತಿದ್ದರು ಸಹ ಗ್ರಾಮಪಂಚಾಯಿತಿ ಆಡಳಿತ ಕಣ್ಮುಚ್ಚಿ ಕುಳಿತಿದೆ.
ಹೊರಬೈಲು ಮಾರ್ಗದ ಸೇತುವೆ ಬಳಿ ಹಾಗೂ ಮೇಳಿಗೆ ಮಾರ್ಗದ ಹೆನ್ನಂಗಿ ಹಳ್ಳದ ಬಳಿ ಕಸದ ರಾಶಿಯೇ ಆವರಿಸಿಕೊಂಡಿದೆ. ಮನೆ ಮನೆಗೆ ಬರುವ ಕಸದ ವಾಹನ
ವಾರಕ್ಕೊಮ್ಮೆ ಬರುವುದರಿಂದ ಕಸದ ತೊಟ್ಟಿ ಅಥವಾ ಹೀಗೆ ಸಾರ್ವಜನಿಕರು ಹಾಕುತ್ತಿದ್ದಾರೆ. ಆದರೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಿಂದರಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದ್ದರು ಗ್ರಾಮಪಂಚಾಯಿತಿ ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ.
Tags:
ತೀರ್ಥಹಳ್ಳಿ ಸುದ್ದಿ