ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕರನ್ನೇ ಮರೆತ್ರಾ ಮೇಳಿಗೆ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ!!? tth

ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕರನ್ನೇ ಮರೆತ್ರಾ ಮೇಳಿಗೆ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ!!?

ತೀರ್ಥಹಳ್ಳಿ : ಮುಜರಾಯಿ ಇಲಾಖೆ ಸಂಬಂಧಪಟ್ಟ ದೇವಸ್ಥಾನಗಳು ಅದರಲ್ಲೂ ಫೆ. 1 ರಂದು ರಥೋತ್ಸವ ನಡೆಸುತ್ತಿರುವ ಮೇಳಿಗೆ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಮುಜರಾಯಿ ಇಲಾಖೆಗೆ ಒಳಪಡುವ ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕರನ್ನು ಆಹ್ವಾನ ಮಾಡಲು ಮರೆತರೆ? ಎಂಬ ಪ್ರೆಶ್ನೆ ಈಗ ಉದ್ಭವವಾಗಿದೆ.

ನೂತನವಾಗಿ ರಥ ನಿರ್ಮಾಣ ಮಾಡಿ ಅದ್ದೂರಿಯಾಗಿ ರಥೋತ್ಸವ ನಡೆಸಲು ಮೇಳಿಗೆ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ ಮುಂದಾಗಿದೆ. ಆದರೆ ಈಗಾಗಲೇ ಎರಡು ಕಾರ್ಯಕ್ರಮ ನಡೆದಿದ್ದು ಶೃಂಗೇರಿ ಶ್ರೀಗಳು ಹಾಗೂ ಹೊರನಾಡು ದೇವಸ್ಥಾನದ ಆಡಳಿತ ಅಧಿಕಾರಿಗಳು ಆದ ಭೀಮೇಶ್ವರ ಜೋಶಿ ಅವರು ಆಗಮಿಸಿ ರಥಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ಎರಡು ಕಾರ್ಯಕ್ರಮಕ್ಕೂ ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕರಿಗೆ ಆಹ್ವಾನ ನೀಡಿಲ್ಲ.

ಅಷ್ಟೇ ಅಲ್ಲದೆ ಫೆ. 1 ರಂದು ನಡೆಯುವ ಅದ್ದೂರಿ ಜಾತ್ರಾ ಮಹೋತ್ಸವಕ್ಕೂ ಸಹ ಆಹ್ವಾನ ನೀಡದೆ ಇರುವುದು ಯಾವ ಕಾರಣಕ್ಕೆ? ಎಂಬ ಪ್ರೆಶ್ನೆ ಒಂದಡೆಯಾದರೆ ಇದರಲ್ಲಿ ಜಾತಿ ರಾಜಕೀಯ ಬಂದಿತೆ? ಎಂಬ ಪ್ರೆಶ್ನೆ ಸಹ ಮೂಡಿದೆ. ಇನ್ನಾದರೂ ಸಂಬಂಧಪಟ್ಟ ಆಡಳಿತ ಮಂಡಳಿಯವರು ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕರನ್ನು ಆಹ್ವಾನ ನೀಡ್ತಾರಾ? ಕಾದು ನೋಡಬೇಕಿದೆ..

Previous Post Next Post