ಮಹಾರಾಷ್ಟ್ರದಲ್ಲಿ ನಡೆಯುವ ಸಾಫ್ಟ್ ಬಾಲ್ ಪಂದ್ಯಾವಳಿಗೆ ತೀರ್ಥಹಳ್ಳಿ ಕ್ರೀಡಾಪಟುಗಳು
ತೀರ್ಥಹಳ್ಳಿ : ಮಹಾರಾಷ್ಟ್ರದ ಅಮರಾವತಿಯಲ್ಲಿ ದಿನಾಂಕ 01.02.2026 ರಿಂದ 05.02.2026 ನಡೆಯುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಸಾಫ್ಟ್ ಬಾಲ್ ಪಂದ್ಯಾವಳಿಯಲ್ಲಿ ಕುವೆಂಪು ವಿಶ್ವವಿದ್ಯಾಲಯ ಸಾಫ್ಟ್ ಬಾಲ್ ತಂಡ ಭಾಗವಹಿಸಲಿದೆ.
ಈ ತಂಡದಲ್ಲಿ ತೀರ್ಥಹಳ್ಳಿ ತುಂಗಾ ಮಹಾ ವಿದ್ಯಾಲಯದ ಮೂವರು ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ಜಯಸೂರ್ಯ 3rd B.Com, ರಶೀದ್ 3rd B.A, ಯಶವಂತ್ 1st B Com ಆಯ್ಕೆಯಾಗಿರುತ್ತಾರೆ. ಸಾಫ್ಟ್ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಲಿ ಎಂದು ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಶುಭ ಹಾರೈಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ