ಫೆ. 1 ರಂದು ಮೇಳಿಗೆ ಲಕ್ಷ್ಮಿ ವೆಂಕಟರಮಣ ದೇವರ ರಥೋತ್ಸವ Jatre

ಫೆ. 1 ರಂದು ಮೇಳಿಗೆ ಲಕ್ಷ್ಮಿ ವೆಂಕಟರಮಣ ದೇವರ ರಥೋತ್ಸವ 

ತೀರ್ಥಹಳ್ಳಿ : ಪುರಾಣ ಪ್ರಸಿದ್ಧವಾದ ತಾಲೂಕಿನ ಮೇಳಿಗೆಯ ಶ್ರೀ ಲಕ್ಷ್ಮಿ ವೆಂಕಟರಮಣ ದೇವರ ರಥೋತ್ಸವ ಫೆ. 1 ರ ಭಾನುವಾರದಂದು ನಡೆಯಲಿದೆ. ವಿಶೇಷವಾಗಿ ಎರಡು ರಥವನ್ನು ಎಳೆಯುವ ರಥೋತ್ಸವ ಇದಾಗಿದೆ. ಈ ಬಾರಿ ಹೊಸದಾಗಿ ಎರಡು ರಥಗಳನ್ನು  ನಿರ್ಮಿಸಲಾಗಿದ್ದು ಹೊಸ ರಥದಲ್ಲಿ ಈ ಬಾರಿ ಲಕ್ಷ್ಮಿ ವೆಂಕಟರಮಣ ದೇವರ ರಥೋತ್ಸವ  ನಡೆಯಲಿದೆ.

ಭಾನುವಾರ ಮಧ್ಯಾಹ್ನ 12 ಗಂಟೆಗೆ ರಥಾರೋಹಣ ನಡೆಯಲಿದ್ದು ಆ ನಂತರ ಭಕ್ತಾದಿಗಳಿಗೆ ಅನ್ನದಾನ ಇರಲಿದೆ. 
ಸಂಜೆ ಭೂತ ಬಲಿ, ಶಯನೋತ್ಸವ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಲು ಸಮಿತಿಯವರು ತಿಳಿಸಿದ್ದಾರೆ..


Previous Post Next Post