ನಾಳೆ ರಾಮೇಶ್ವರ ದೇವಸ್ಥಾನದಲ್ಲಿ "ದೀಪದ ಬೆಳಕಿನಲ್ಲಿ ದೇವರ ದರ್ಶನ" Raameshvara temple

ನಾಳೆ ರಾಮೇಶ್ವರ ದೇವಸ್ಥಾನದಲ್ಲಿ "ದೀಪದ ಬೆಳಕಿನಲ್ಲಿ ದೇವರ ದರ್ಶನ"

ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಪುಷ್ಯ ಮಾಸದ ಶುದ್ಧ ಹುಣ್ಣಿಮೆಯಂದು ಅಂದರೆ ದಿನಾಂಕ 3.1.2026 ಶನಿವಾರ ಬೆಳಿಗ್ಗೆ
5.45 ರಿಂದ 6.30ರ ವರೆಗೆ ಧನುರ್ಮಾಸದ ಆದ್ರ್ರಾ
ನಕ್ಷತ್ರದ ಅಂಗವಾಗಿ ಆರ್ದ್ರೋತ್ಸವ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಅಂಗವಾಗಿ ರಾಮೇಶ್ವರ
ದೇವರ ಸನ್ನಿಧಿಯಲ್ಲಿ "ದೀಪದ ಬೆಳಕಿನಲ್ಲಿ ದೇವರ ದರ್ಶನ
ವೆಂಬ"ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ಆಚರಿಸಲು
ಸಂಕಲ್ಪಿಸಲಾಗಿದ್ದು ಪ್ರಧಾನ ತಂತ್ರಿಗಳಾದ ಲಕ್ಷ್ಮೀಶ್ ತಂತ್ರಿಗಳು ಹಾಗೂ ಪ್ರಧಾನ ಅರ್ಚಕರಾದ ರಾಜಶೇಖರ್ ಭಟ್ ಅವರ ನೇತೃತ್ವದಲ್ಲಿ ನಡೆಯಲಿದೆ. ಈ ಧಾರ್ಮಿಕ
ಕಾರ್ಯದಲ್ಲಿ ಸಮಸ್ತ ಭಕ್ತರು ಭಾಗವಹಿಸಿ ಶ್ರೀ ದೇವರ ಕೃಪೆ ಗೆ ಪಾತ್ರರಾಗಲು ಕೋರಲಾಗಿದೆ..
Previous Post Next Post