ತೀರ್ಥಹಳ್ಳಿ ಬಿಜೆಪಿಯ ನೂತನ ಕಚೇರಿ ಉದ್ಘಾಟನೆ bjp

ತೀರ್ಥಹಳ್ಳಿ ಬಿಜೆಪಿಯ ನೂತನ ಕಚೇರಿ ಉದ್ಘಾಟನೆ 
ತೀರ್ಥಹಳ್ಳಿ : ಕೊಪ್ಪ ಸರ್ಕಲ್ ಬಳಿ ಇದ್ದಂತಹ ಬಿಜೆಪಿ ಕಚೇರಿಯನ್ನು ಸ್ಥಳಾಂತರ ಮಾಡಲಾಗಿದ್ದು ಆಗುಂಬೆ ಬಸ್ ನಿಲ್ದಾಣ ಸಮೀಪ ಆಭರಣ ಚಿನ್ನದ ಮಳಿಗೆ ಪಕ್ಕದಲ್ಲಿ ನೂತನವಾಗಿ ಬಿಜೆಪಿ ಕಚೇರಿ ಉದ್ಘಾಟನೆ ಮಾಡಲಾಯಿತು.

ಕೊಪ್ಪ ಸರ್ಕಲ್ ಬಳಿ ಇದ್ದ ಕಚೇರಿ ರಸ್ತೆ ಅಗಲೀಕರಣ ಆಗುವುದರಿಂದ  ಸ್ಥಳಾಂತರ ಮಾಡಲಾಗಿದೆ. ಗಣಪತಿ ಹೋಮ ಮಾಡುವ ಮೂಲಕ ಕಚೇರಿ ಆರಂಭಿಸಲಾಗಿದ್ದು 
ಇನ್ನು ಮುಂದಿನ ದಿನಗಳಲ್ಲಿ ಬಿಜೆಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. 

ಶಾಸಕ ಆರಗ ಜ್ಞಾನೇಂದ್ರ ದೀಪ ಹಚ್ಚಿ, ಪ್ರಾರ್ಥನೆ ಮಾಡಿ ಉದ್ಘಾಟನೆ ಮಾಡಿದರು..
Previous Post Next Post