ಬಿಜೆಪಿ ಗಾಂಧಿಜೀ ಸ್ವರಾಜ್ ಆಶಯಕ್ಕೆ ಧಕ್ಕೆ ತರುವ ಕೆಲಸ ಮಾಡಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ lakshmi Hebbalkar

ಬಿಜೆಪಿ ಗಾಂಧಿಜೀ ಸ್ವರಾಜ್ ಆಶಯಕ್ಕೆ ಧಕ್ಕೆ ತರುವ ಕೆಲಸ ಮಾಡಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಶಿವಮೊಗ್ಗ : ಬಿಜೆಪಿಗರು ಗಾಂಧಿಜೀ ಅವರ ಸ್ವರಾಜ್ ಆಶಯಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ವಿರುದ್ದ ಶಿವಮೊಗ್ಗದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಹಳ್ಳಿಗಳಲ್ಲಿ ಇರುವಂತಹ ಶ್ರಮಜೀವಿಗಳಿದ್ದಾರೆ. ಮನರೇಗಾ ಶ್ರಮಿಕರಿಗೆ ಕಳೆದ 20 ವರ್ಷಗಳಿಂದ ಅವರ ಆಗು ಹೋಗುಗಳಿಗೆ ಆಸರೆ ಆಗಿತ್ತು. ಇಂದು ಕೇಂದ್ರ ಸರ್ಕಾರ ಕೇವಲ ಮನರೇಗಾ ಅಂತ ಹೆಸರು ಮಾತ್ರ ಬದಲಾವಣೆ ಮಾಡಲಿಲ್ಲ. ಅವರು ಮಹಾತ್ಮ ಗಾಂಧಿಜೀ ಅವರ ಕನಸು ಗ್ರಾಮ ಸ್ವರಾಜ್ಯ ಆಗಿತ್ತು. ಇದರಿಂದ ನಾವು ಮಹಾತ್ಮ ಗಾಂಧಿ ಮನರೇಗಾ ಯೋಜನೆ ಎಂದು ಹೆಸರು ಇಟ್ಟಿದ್ದು ಎಂದರು.

ಗ್ರಾಮ ಸ್ವರಾಜ್ಯದ ಆಶಯಕ್ಕೆ ಕೊಡಲಿ ಪೆಟ್ಟು ಕೊಡುವಂತಹ ಕೆಲಸವನ್ನು ಬಿಜೆಪಿಗರು ಮಾಡಿ, ಯೋಜನೆಯಲ್ಲಿ ಬಹಳಷ್ಟು ಬದಲಾವಣೆ ಮಾಡಿದ್ದಾರೆ. ನಮ್ಮ ದೇಶ ಅತಿದೊಡ್ಡ ಗಣರಾಜ್ಯವಾಗಿದೆ. ಯಾವುದೇ ದೊಡ್ಡ ಯೋಜನೆಯಲ್ಲಿ ಬದಲಾವಣೆ ಮಾಡಬೇಕಾದರೆ ರಾಜ್ಯಗಳ ಜೊತೆ ಚರ್ಚೆ ಮಾಡಬೇಕಿತ್ತು. ಮನರೇಗಾದ ಮೂಲಕ ಎಲ್ಲ ಗ್ರಾಮದವರಿಗೂ ನಾವು ಸಂವಿಧಾನದ ಮೂಲಕ ನೀಡಿದ್ದೆವು. ಆದರೆ, ಯಾವುದೇ ಚರ್ಚೆ ಮಾಡದೇ, ನಮ್ಮ ಮೇಲೆ 17 ಗಂಟೆಗಳ ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಈಗ ವಿಬಿ ಜಿ ರಾಮ್ ಜಿ ಮೂಲಕ ಗ್ರಾಮಪಂಚಾಯಿತಿಗಳ ಹಕ್ಕನ್ನು ಕಸಿದಿದ್ದಾರೆ. ಗ್ರಾಮದ ಪ್ರತಿ ಕಾಮಗಾರಿಯನ್ನು ಉದ್ಯೋಗ ಖಾತ್ರಿಯಲ್ಲಿ ತೆಗೆದುಕೊಳ್ಳುತ್ತಿದ್ದೆವು ಎಂದು ಹೇಳಿದರು.

ಇವತ್ತು ಇದಕ್ಕೆ ತಿಲಾಂಜಲಿ ನೀಡಿ ಹಳ್ಳಿ ಕೆಲಸವನ್ನು ದೆಹಲಿಯಲ್ಲಿ ಕೂತು ನಿರ್ಧಾರ ಮಾಡುತ್ತಿದ್ದಾರೆ. ಗ್ರಾಮ, ತಾಲೂಕು, ಜಿಲ್ಲೆಗೆ ನೀಡುವ ಕಾಮಗಾರಿಯ ಕುರಿತು ದೆಹಲಿಯಿಂದ ನಿರ್ಧರಿತರಾಗಿ ಬರಬೇಕಿದೆ. ಇದರಿಂದ ಪ್ರತಿ ಗ್ರಾಮದವರ ಪರವಾಗಿ ನಾವು ರಾಜ್ಯವ್ಯಾಪಿ ಆಂದೋಲನವನ್ನು ತೆಗೆದುಕೊಳ್ಳುತ್ತಿದ್ದೇವೆ. ಯೋಜನೆಯಲ್ಲಿ ಹಣ ದುರುಪಯೋಗ ಆಗುವುದನ್ನು ಕಂಡು ಹಿಡಿಯಲು ಬಿಜೆಪಿಯವರಿಗೆ 12 ವರ್ಷ ಬೇಕಾಯಿತಾ?. ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದರು. ಕಳೆದ 12 ವರ್ಷಗಳಿಂದ ಬಿಜೆಪಿಯವರು ಏನ್ ಕತ್ತೆ ಕಾಯುತ್ತಿದ್ದರಾ ಎಂದು ಪ್ರಶ್ನಿಸಿದರು.

ಬೆಳಗಾವಿಯಲ್ಲಿ 400 ಕೋಟಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಇದು ಬೆಳಗಾವಿ ಗಡಿ ಭಾಗದಲ್ಲಿ ನಡೆದಿದೆ. ನಮಗೆ ಮಹಾರಾಷ್ಟ್ರದ ಪೊಲೀಸರಿಂದ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ಆದರೂ ನಾವು ತನಿಖೆ ಮಾಡುತ್ತಿದ್ದೇವೆ ಎಂದರು. ಕಳವಾದ ಹಣ ಯಾರದ್ದು ಅಂತಾ ಬಿಜೆಪಿಯವರು ಏಕೆ ಇಷ್ಟು ಬೇಗ ತೀರ್ಮಾನಕ್ಕೆ ಬಂದರು, ಹಣ ಗುಜರಾತ್​ ನಿಂದ ಬಂದಿದೆ. ಅಲ್ಲಿ ಯಾರ ಸರ್ಕಾರ ಇದೆ ಎಂದು ಪ್ರಶ್ನಿಸಿದರು. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

Previous Post Next Post