ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ರಾಶಿ - ವರದಿ ಬೆನ್ನಲ್ಲೇ ಕಸ ಕಂಪ್ಲಿಟ್ ಕ್ಲೀನ್..! Shivamogga suddi impact

ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ರಾಶಿ - ವರದಿ ಬೆನ್ನಲ್ಲೇ ಕಸ ಕಂಪ್ಲಿಟ್ ಕ್ಲೀನ್..!

ಶಿವಮೊಗ್ಗ ಸುದ್ದಿ ವರದಿ ಫಲಶ್ರುತಿ



ತೀರ್ಥಹಳ್ಳಿ : ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಿಂದರಲ್ಲಿ ಕಸದ ರಾಶಿ ಕಾಣಿಸುತ್ತಿದೆ. ಕಸದ ತೊಟ್ಟಿಯಲ್ಲಿ ತುಂಬಿ ಕಸ ತುಂಬಿ ತುಳುಕುತ್ತಿದ್ದರು ಸಹ ಗ್ರಾಮಪಂಚಾಯಿತಿ ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಶಿವಮೊಗ್ಗ ಸುದ್ದಿ ಬೆಳಗ್ಗೆ ವರದಿ ಬಿತ್ತರಿಸಿತ್ತು. ವರದಿಯಾದ ಕೆಲವೇ ಗಂಟೆಯೊಳಗೆ ಕಸವನ್ನು ಸಂಪೂರ್ಣ ಕ್ಲೀನ್ ಮಾಡಲಾಗಿದೆ.

ಹೊರಬೈಲು ಮಾರ್ಗದ ಸೇತುವೆ ಬಳಿ ಹಾಗೂ ಮೇಳಿಗೆ ಮಾರ್ಗದ ಹೆನ್ನಂಗಿ ಹಳ್ಳದ ಬಳಿ ಕಸದ ರಾಶಿಯೇ ಆವರಿಸಿಕೊಂಡಿತ್ತು. ಈಗ ಈ ಎರಡು ಜಾಗ ಹಾಗೂ ಮೇಲಿನಕುರುವಳ್ಳಿಯ ಇತರ ಕಡೆ ಕಸವನ್ನು ಕ್ಲೀನ್ ಮಾಡಲಾಗಿದೆ. ಮನೆ ಮನೆಗೆ ಕಸದ ವಾಹನ
ವಾರಕ್ಕೊಮ್ಮೆ ಬರುವುದರಿಂದ ಸಾರ್ವಜನಿಕರು ಕಸವನ್ನು ವಾಹನಕ್ಕೆ ಹಾಕಬೇಕಾಗಿ ತಿಳಿಸಲಾಗಿದೆ.

ವರದಿಯಾದ ಕೆಲವೇ ಗಂಟೆಯೊಳಗೆ ಕಸವನ್ನು ಕ್ಲೀನ್ ಮಾಡಿಸಿದ್ದಕ್ಕೆ ಅಧ್ಯಕ್ಷರಾದ ಪ್ರಭಾಕರ್ ಹಾಗೂ ಪಿಡಿಓ ಅವರನ್ನು ಸಾರ್ವಜನಿಕರು ಅಭಿನಂದನೆ ತಿಳಿಸಿದ್ದಾರೆ..



Previous Post Next Post