ತೀರ್ಥಹಳ್ಳಿಯ ಆಭರಣ ಜ್ಯುವೆಲರ್ಸ್ ನಲ್ಲಿ ಸಮಾಜಮುಖಿ ಕಾರ್ಯಕ್ರಮ
ತೀರ್ಥಹಳ್ಳಿ : ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಸಂಸ್ಥೆಯಾದ ಆಭರಣ ಜ್ಯುವೆಲ್ಲರ್ಸ್ ನ ತೀರ್ಥಹಳ್ಳಿಯ ಶಾಖೆಯಲ್ಲಿ ಈ ತಿಂಗಳಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನ ನಡೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪಟ್ಟಣದ ಆಗುಂಬೆ ರಸ್ತೆಯ ಎಚ್ ಡಿ ಎಫ್ ಸಿ ಬ್ಯಾಂಕ್ ಎದುರು ಭಾಗದಲ್ಲಿ ಇರುವ ಆಭರಣ ಜ್ಯುವೆಲರ್ಸ್ ಶಾಖೆಯಲ್ಲಿ ಸೇನಾ ದಿನಾಚರಣೆಯ ಅಂಗವಾಗಿ ನಿವೃತ್ತ ಸೈನಿಕರನ್ನು ಗೌರವಿಸಿ ಸನ್ಮಾನಿಸಲಾಯಿತು. ನಿವೃತ್ತ ಸೈನಿಕರಾದ ಕೃಷ್ಣಕುಮಾರ್, ಚಂದ್ರಪ್ಪ ಗೌಡ, ಶಿವಪ್ಪ, ಯೋಗೇಂದ್ರ,ನಾರಾಯಣ, ಕವೀಶ್,ನಂದೀಶ್, ಅಶೋಕ್,ಯುವರಾಜ್, ಪ್ರದೀಪ್,ಸುಧಾಕರ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು..
ಪೌರ ಕಾರ್ಮಿಕರಿಗೆ ಗೌರವ
ತೀರ್ಥಹಳ್ಳಿ ಪಟ್ಟಣವನ್ನು ಸ್ವಚ್ಛವಾಗಿ ಇಡಲು ಮುಖ್ಯ ಕಾರಣ ಕಾರ್ಮಿಕರು. ಈ ಕಾರಣದಿಂದ ಪೌರ ಕಾರ್ಮಿಕರನ್ನು ಆಭರಣ ಜ್ಯುವೆಲರ್ಸ್ ಮಳಿಗೆಯಲ್ಲಿ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
ರಂಗೋಲಿ ಬಿಡಿಸುವ ಕಾರ್ಯಕ್ರಮ
ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮವನ್ನು ಆಭರಣ ಜ್ಯುವೆಲರ್ಸ್ ವತಿಯಿಂದ ಆಯೋಜನೆ ಮಾಡಲಾಗಿತ್ತು. ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರು ಭಾಗಿಯಾಗಿ ಚೆಂದ ಚೆಂದದ ರಂಗೋಲಿ ಬಿಡಿಸಿ ಸಂಭ್ರಮಿಸಿದರು. ಈ ವೇಳೆ ಭಾಗವಹಿಸಿದ್ದ ಮಹಿಳೆಯರಿಗೆ ಬಹುಮಾನ ವಿತರಣೆ ಮಾಡಲಾಯಿತು..
ಹೀಗೆ ಪ್ರತಿ ತಿಂಗಳು ವಿಶೇಷ ಕಾರ್ಯಕ್ರಮ, ಸಮಾಜಮುಖಿ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿರುವ ಆಭರಣ ಜ್ಯುವೆಲರ್ಸ್ ಸಂಸ್ಥೆಯ ತೀರ್ಥಹಳ್ಳಿ ಶಾಖೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ...
Tags:
ಆಭರಣ ಜ್ಯುವೆಲ್ಲರ್ಸ್