ತೀರ್ಥಹಳ್ಳಿಯಲ್ಲಿ ಕೆಎಫ್'ಡಿಗೆ ಯುವಕ ಬಲಿ..!? KFD

ತೀರ್ಥಹಳ್ಳಿಯಲ್ಲಿ ಕೆಎಫ್'ಡಿಗೆ ಯುವಕ ಬಲಿ..!?

ತೀರ್ಥಹಳ್ಳಿ : ತಾಲೂಕಿನ ಕಟ್ಟೆಹಕ್ಲು ಸಮೀಪದ ಸಸಿ ತೋಟದ ನಿವಾಸಿ ಕಿಶೋರ್ ಕಳೆದ ವಾರ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅವರನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ನಂತರ ಮಂಗಳೂರು ಮಣಿಪಾಲ್ ಆಸ್ಪತ್ರೆಗೆ
ವರ್ಗಾಯಿಸಲಾಗಿತ್ತು.

ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿಶೋರ್ ನಿನ್ನೆ ತಡರಾತ್ರಿ ಸುಮಾರು 2.30ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಕಿಶೋರ್ ಅವರಿಗೆ 
ಕೆಎಫ್'ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಕಾಯಿಲೆ ತಗುಲಿರುವ ಶಂಕೆ ವ್ಯಕ್ತವಾಗಿದೆ. ಇದು ಈ ವರ್ಷದ ಮೊದಲ ಸಾವಿನ ಕೇಸ್ ಆಗಿದ್ದು ವೈದ್ಯಕೀಯ ವ್ಯವಸ್ಥೆ ಇನ್ನಷ್ಟು ಸದೃಢಗೊಳ್ಳಬೇಕಾದ ಅಗತ್ಯವಿದೆ.

ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅನಾಹುತಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ನೇರವಾಗಿ ಉತ್ತರ ನೀಡಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ.
Previous Post Next Post