ರಾಷ್ಟ್ರಮಟ್ಟಕ್ಕೆ ವಾಗ್ದೇವಿ ಸಂಸ್ಥೆಯ ಮಿಥಾಲಿ ಟಿ ಎಸ್ ಆಯ್ಕೆ
ತೀರ್ಥಹಳ್ಳಿ : ದಿನಾಂಕ 05.12.2025 ರಂದು ಶಾಲಾ ಶಿಕ್ಷಣ ಇಲಾಖೆಯವರು ಬೆಂಗಳೂರಿನ ಕಂಠೀರವ
ಕ್ರೀಡಾಂಗಣದಲ್ಲಿ ನಡೆಸಿದ 17 ವರ್ಷ ವಯೊಮಿತಿಯೊಳಗಿನ ಬಾಲಕ-ಬಾಲಕಿಯರ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮಿಥಾಲಿ ಟಿ.ಎಸ್ (9ನೆಯ ತರಗತಿ) ಭಾಗವಹಿಸಿ ಗುಂಡು ಎಸೆತದಲ್ಲಿ 12.26 ಮೀ ದೂರ ಎಸೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ತೆರಳುವ ಈ ವಿದ್ಯಾರ್ಥಿನಿಯು
ತಗಡವಳ್ಳಿಯ ಗೀತಾ ಹಾಗೂ ಶಶಿಕಾಂತ್ ದಂಪತಿಗಳ ಪುತ್ರಿಯಾಗಿದ್ದು ಶೈಕ್ಷಣಿಕವಾಗಿ ಪ್ರತಿಭಾನ್ವಿತೆ, ಮತ್ತು ಗುಂಡು ಎಸೆತದಲ್ಲಿ ವಿಶೇಷ ತರಭೇತಿಯನ್ನು ಅರ್ಜುನ ಪ್ರಶಸ್ತಿ ಪುರಸ್ಕೃತರು ಹಾಗೂ ಅಂತರಾಷ್ಟ್ರೀಯ
ಮಟ್ಟದ ಗುಂಡು ಎಸೆತದಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಶಸ್ತಿಯನ್ನು ಪಡೆದಿರುವ ಹೆಮ್ಮೆಯ ಮಲೆನಾಡಿನ
ಪ್ರತಿಭೆಯಾದ ಎಸ್.ಡಿ. ಈಶನ್ ಇವರ ಬಳಿಯಲ್ಲಿ ಪಡೆಯುತ್ತಿದ್ದಾಳೆ.
ಶಿಕ್ಷಣ ಇಲಾಖೆವರು ಆಯೋಜಿಸಿರುವ ಕ್ರೀಡೆಗಳಲ್ಲಿ ಮಾತ್ರವಲ್ಲದೇ ದಸರಾ ಕ್ರೀಡೆಯಲ್ಲಿಯೂ ಸಹ ಅನೇಕ
ಬಹುಮಾನವನ್ನು ಪಡೆಯುವುದರ ಮೂಲಕ ಶಿವಮೊಗ್ಗ ಜಿಲ್ಲೆಗೆ, ತೀರ್ಥಹಳ್ಳಿ ತಾಲ್ಲೂಕಿಗೆ ಓದುತ್ತಿರುವ ಶಾಲೆಗೆ
ತಂದಿರುತ್ತಾಳೆ.
ಇವಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಶಿಕ್ಷಕವೃಂದ ಮತ್ತು
ಪೋಷಕರು ಅಭಿನಂದಿಸಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಸಹ ಚಿನ್ನದ ಪದಕವನ್ನು ಪಡುಕೊಳ್ಳಲಿ ಎಂದು ಶುಭ
ಹಾರೈಸಿರುತ್ತಾರೆ.
Tags:
ವಾಗ್ದೇವಿ ಸಂಸ್ಥೆ