ಡಾಲರಿಗೆ 'ನೈಂಟಿ' ಹಾಕಿಸಿದ ಮೋದಿಜಿ ಎಂದ ಕಾಂಗ್ರೆಸ್ - ಆದ್ರೆ 'ನೈಂಟಿ' ಹಾಕಿ ಬ್ಯಾನರ್ ಹಾಕಿದ್ಯಾರು ಎಂದು ಪ್ರಶ್ನೆ ಮಾಡಿದ ಸಾರ್ವಜನಿಕರು..!? tth

ಡಾಲರಿಗೆ 'ನೈಂಟಿ' ಹಾಕಿಸಿದ ಮೋದಿಜಿ ಎಂದ ಕಾಂಗ್ರೆಸ್  - ಆದ್ರೆ 'ನೈಂಟಿ' ಹಾಕಿ ಬ್ಯಾನರ್ ಹಾಕಿದ್ಯಾರು? ಎಂದು ಪ್ರಶ್ನೆ ಮಾಡಿದ ಸಾರ್ವಜನಿಕರು..!?
ತೀರ್ಥಹಳ್ಳಿ : ರೂಪಾಯಿ ಅಪಮೌಲ್ಯವಾಗಿದೆ, ಡಾಲರ್ ಮೂಲ ಬೆಲೆಯಲ್ಲಿ ರೂಪಾಯಿ ಕುಸಿತ ಕಂಡಿದೆ. ಒಂದು ಡಾಲರ್ ಗೆ 90 ರೂ ಆಗಿರುವ ಕಾರಣ ಡಾಲರಿಗೆ 'ನೈಂಟಿ' ಹಾಕಿಸಿದ ಮೋದಿಜಿ ಎಂದು ತೀರ್ಥಹಳ್ಳಿ ಕಾಂಗ್ರೆಸ್ ನಿಂದ ವಿಭಿನ್ನ ರೀತಿಯ ಪ್ರತಿಭಟನೆ ಮಾಡಲಾಯಿತು.

ತೀರ್ಥಹಳ್ಳಿಯ ತುಂಗಾ ನದಿ ಸಮೀಪ ಬ್ಯಾನರ್ ಅಳವಡಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಲಾಯಿತು. ಆದರೆ ಬ್ಯಾನರ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಂದ ನಂತರ ಅದನ್ನು ಸೂಕ್ಷ್ಮವಾಗಿ ಪರಿಗಣಿಸಿದ
ಜನರು 'ನೈಂಟಿ' ಹಾಕಿ ಬ್ಯಾನರ್ ಹಾಕಿದ್ಯಾರು? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಹೌದು ಬ್ಯಾನರ್ ನಲ್ಲಿ ಮೋದಿಜಿ ಎಂದು ಬರೆಯುವ ಬದಲಾಗಿ ವಿಭಿನ್ನ ಶೈಲಿಯಲ್ಲಿ ಬರೆದಿದ್ದು ಇದು ಮೋದಿಯನ್ನು ಮೂದಲಿಸಲು ಹೋಗಿ ಎಡವಟ್ಟು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೋಡಿದವರು ಇದನ್ನು ಬರೆದಿರುವವರ ಕಥೆ ಬಿಡಿ, ಓದುವವರು ಸಹ  'ನೈಂಟಿ' ಹಾಕಿ ಅರ್ಥೈಸಿಕೊಳ್ಳಬೇಕೇನೋ ಎಂದು ಅಪಹಾಸ್ಯ ಮಾಡಿದ್ದಾರೆ..
Previous Post Next Post