ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆಯಿಂದ ನಿಯಮ ಜಾರಿ.. tth

ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆಯಿಂದ ನಿಯಮ ಜಾರಿ..
ತೀರ್ಥಹಳ್ಳಿ :  ಪಟ್ಟಣದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ನ್ಯಾಷನಲ್ ಹೈವೇ ಇವರ ವತಿಯಿಂದ ತೀರ್ಥಹಳ್ಳಿಯ ಪ್ರಮುಖ ಸ್ಥಳಗಳಲ್ಲಿ ನೋ ಪಾರ್ಕಿಂಗ್, ಒನ್ ವೇ, ನೋ ಎಂಟ್ರಿ, 4 ಚಕ್ರದ ವಾಹನಗಳಿಗೆ ಹಾಗೂ 2 ಚಕ್ರದ ವಾಹನಗಳ ನಿಲುಗಡೆಗೆ ಬೋರ್ಡ್ ಗಳನ್ನು ಅಳವಡಿಸಿದ್ದು ವಾಹನ ಸವಾರರು ಸೂಕ್ತ ರೀತಿಯಲ್ಲಿ ತಿಳಿಪಡಿಸಿದ ಜಾಗದಲ್ಲಿ ಬೋರ್ಡ್ ಗಳನ್ನು ನೋಡಿಕೊಂಡು ವಾಹನಗಳನ್ನು ನಿಲ್ಲಿಸಲು ತೀರ್ಥಹಳ್ಳಿ ಪೊಲೀಸ್ ಇಲಾಖೆ ತಿಳಿಸಿದೆ.

ಪಟ್ಟಣದಲ್ಲಿ ಸೋಮವಾರ ಸಂತೆ ನಡೆಯುವ ವೇಳೆ ವಾಹನಗಳ ದಟ್ಟನೆ ಕಂಡು ಬರುತ್ತಿದೆ. ಅಷ್ಟೇ ಅಲ್ಲದೆ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡುವುದು, ಸಂಚಾರಿ ನಿಯಮವನ್ನು ಪಾಲಿಸದೇ ಇರುವುದು ಕಂಡು ಬರುತ್ತಿದ್ದು ಇನ್ನು ಮುಂದೆ ಪ್ರತಿಯೊರ್ವ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ..
Previous Post Next Post