ಸ್ಕೂಟಿ - ಕಾರು ನಡುವೆ ಅಪಘಾತ - ಮಹಿಳೆಯೋರ್ವರಿಗೆ ಗಾಯ..! tth

ಸ್ಕೂಟಿ - ಕಾರು ನಡುವೆ ಅಪಘಾತ - ಮಹಿಳೆಯೋರ್ವರಿಗೆ ಗಾಯ..!
ತೀರ್ಥಹಳ್ಳಿ : ಸ್ಕೂಟಿ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ಮಹಿಳೆಯೋರ್ವರಿಗೆ ಗಾಯವಾಗಿದ್ದು ಅವರನ್ನು ಜೆಸಿ ಆಸ್ಪತ್ರೆಗೆ ರವಾನಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ತೀರ್ಥಹಳ್ಳಿಯ ಸಾಗರ ರಸ್ತೆಯಲ್ಲಿರುವ ಸುಮುಖ ಗ್ಯಾರೇಜ್
ಎದುರು ಅಪಘಾತ ಸಂಭವಿಸಿದೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. ಶಾಲಾ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ದೊಡ್ಡ ವಾಹನಗಳು ಅತ್ಯಂತ ವೇಗದಿಂದ ಚಲಾವಣೆ ಮಾಡುತ್ತಿರುವುದೇ ಇಂತಹ ಅಪಘಾತಕ್ಕೆ ಕಾರಣವಾಗಿದೆ.

ಮಹಿಳೆಯೋರ್ವರಿಗೆ ಸಣ್ಣಪುಟ್ಟ ಪೆಟ್ಟಾಗಿದ್ದು ಅವರನ್ನು
ಆಸ್ಪತ್ರೆಗೆ ರವಾನೆ ಮಾಡಲಾಗಿದೆ.. 

Previous Post Next Post