ಶಾಲಾ ವಾಹನ ಚಾಲಕರಿಂದ ಅತೀ ವೇಗದ ಚಾಲನೆ - ಪೊಲೀಸ್ ಇಲಾಖೆ ಗಮನಿಸಲಿ tth

ಶಾಲಾ ವಾಹನ ಚಾಲಕರಿಂದ ಅತೀ ವೇಗದ ಚಾಲನೆ - ಪೊಲೀಸ್ ಇಲಾಖೆ ಗಮನಿಸಲಿ 
ತೀರ್ಥಹಳ್ಳಿ : ಶಾಲಾ ವಾಹನಗಳ ಚಾಲಕರು ಮಕ್ಕಳನ್ನ ವಾಹನದಲ್ಲಿ ಕೂರಿಸಿಕೊಂಡು ಅತಿ ವೇಗವಾಗಿ ವಾಹನವನ್ನ ಚಾಲನೆ ಮಾಡುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ. 

ಅದರಲ್ಲೂ ಶಾಲಾ ಬಸ್, ಟಿಟಿ ವಾಹನ, ಕಾರುಗಳಲ್ಲಿ ಮಕ್ಕಳನ್ನ ಕೂರಿಸಿಕೊಂಡು ಹೋಗುವ ಸಂದರ್ಭಗಳಲ್ಲಿ ಅತಿ ವೇಗದಿಂದ ವಾಹನಗಳನ್ನ ಚಾಲನೆ ಮಾಡಲಾಗುತ್ತಿದೆ.
ಅಷ್ಟೇ ಅಲ್ಲದೆ ಅಕ್ಕಪಕ್ಕದಲ್ಲಿ ಬರುವಂತಹ ವಾಹನಗಳನ್ನು ಪರಿಗಣಿಸದೆ ಬೇಕಾ ಬಿಟ್ಟಿಯಾಗಿ ವಾಹನಗಳನ್ನು ಓಡಿಸುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಶಾಲಾ ವಾಹನ ಚಾಲಕರನ್ನು ಕರೆಸಿ ತಿಳಿಹೇಳಬೇಕಿದೆ.

ಪೋಷಕರು ತಮ್ಮ ಮಕ್ಕಳನ್ನ ವಾಹನ ಚಾಲಕರನ್ನು ನಂಬಿ ಶಾಲಾ ವಾಹನಗಳಲ್ಲಿ ಕಳಿಸುತ್ತಾರೆ. ಆದರೆ ಶಾಲಾ ವಾಹನದ ಚಾಲಕರು ಬೇಕಾಬಿಟ್ಟಿಯಾಗಿ ವಾಹನ ಚಲಾವಣೆ ಮಾಡುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ..

Previous Post Next Post