ಶಿಕ್ಷಣ ಸಚಿವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದ ಬಳಕೆ - ವ್ಯಕ್ತಿಯೋರ್ವನ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ದೂರು
ತೀರ್ಥಹಳ್ಳಿ : ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಗಿರೀಶ್ ಎಸ್ ಉಡುಪ, ಹುಂಚಾ ವಾಸಿ, ಇವನು ದಿನಾಂಕ: 29-11-2025 ರಂದು ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಸರ್ಕಾರದ ಸಾಕ್ಷರತಾ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯ ಮಧು
ಬಂಗಾರಪ್ಪ ಇವರ ಕುರಿತು ಈ ಪಿರ್ಯಾದುವಿನೊಂದಿಗೆ ಲಗತ್ತು ಮಾಡಿರುವ ಜಾಲತಾಣದ ಪ್ರತಿಯಂತೆ ತೀರಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೋಸ್ಟ್ ಹಾಕಿದ್ದು, ಇದರಿಂದ ನಮ್ಮ ಪಕ್ಷದ ಮುಖಂಡರಾದ ಹಾಗೂ ಸಚಿವರಾದ ಮಧು ಬಂಗಾರಪ್ಪ ಇವರ ಗೌರವಕ್ಕೆ ಚುತಿ ಉಂಟು ಮಾಡಿರುತ್ತಾನೆ.
ಇವನ ವಿರುದ್ಧ ತಾವು ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡು, ಈತನ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ