ಪಾಪ ಕಳೆದ ಸ್ಥಳಕ್ಕೆ ಪರಶುರಾಮನ ಎಂಟ್ರಿ - ಈ ಬಾರಿಯ ಹೈಲೆಟ್ ಸ್ಪಾಟ್ ಆಗಲಿದೆ ತುಂಗಾ ತೀರ jatre

ಪಾಪ ಕಳೆದ ಸ್ಥಳಕ್ಕೆ ಪರಶುರಾಮನ ಎಂಟ್ರಿ - ಈ ಬಾರಿಯ ಹೈಲೆಟ್ ಸ್ಪಾಟ್ ಆಗಲಿದೆ ತುಂಗಾ ತೀರ
ತೀರ್ಥಹಳ್ಳಿ : ತಾಯಿಯ ಹತ್ಯೆ ಮಾಡಿದ ಪಾಪ ಪರಿಹಾರದ ಪುಣ್ಯ ಕ್ಷೇತ್ರವಾಗಿರುವ ತೀರ್ಥಹಳ್ಳಿಯ ರಾಮೇಶ್ವರನ ಧಾರ್ಮಿಕ ಸ್ಥಳವಾಗಿರುವ ತುಂಗಾ ನದಿಯ ತೀರಕ್ಕೆ ಈಗ ಪರಶುರಾಮನ ಆಗಮನವಾಗಿದೆ.  ಇದು ಈ ಬಾರಿಯ ಎಳ್ಳಮಾವಾಸ್ಯೆ ಜಾತ್ರೆಯ ಹೈಲೆಟ್ ಆಗಲಿದ್ದು ಜಾತ್ರೆಗೆ ಆಗಮಿಸುವವರಿಗೆ ಇದೊಂದು ಸೆಲ್ಫಿ ಪಾಯಿಂಟ್ ಸಹ ಆಗಲಿದೆ.

ಸುಮಾರು 27 ಅಡಿ ಎತ್ತರದ ಪರಶುರಾಮನ ಪ್ರತಿಮೆಯನ್ನು ತುಂಗಾ ನದಿ ತೀರದ ಮರಳು ಗುಡ್ಡೆಯ ಕಲ್ಲು ಬಂಡೆಯ ಮೇಲೆ ಸ್ಥಾಪಿಸಲಾಗುತ್ತಿದೆ. ಭದ್ರಾವತಿಯ ವಿಷ್ಣು  ಅವರ ಕೈ ಚಳಕದಲ್ಲಿ ಮೂಡಿ ಬಂದಿರುವ ಈ ಪ್ರತಿಮೆಯನ್ನು ಈ ಬಾರಿ ಜಾತ್ರೆಗೆ ತರಬೇಕು ಎಂದು ಬೇಡಿಕೆ ಇಡಲಾಗಿತ್ತು. ಬೇಡಿಕೆಗೆ ಸ್ಪಂದಿಸಿದ್ದು ತೆಪ್ಪೋತ್ಸವ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಡಾ. ಸುಂದರೇಶ್. 

ಭದ್ರಾವತಿಯಿಂದ ಪರಶುರಾಮನ ಪ್ರತಿಮೆ ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಯುವ ಮುಖಂಡರಾದ ಅಮರಾನಾಥ್ ಶೆಟ್ಟಿ ಹಾಗೂ ಶ್ರೀಕಾಂತ್ ಬೆಟ್ಟಮಕ್ಕಿ,  ಈ ಬಾರಿ ಈ ಪ್ರತಿಮೆ ತರಿಸಬೇಕು ಎಂಬ ಒತ್ತಾಯ ಹೆಚ್ಚಾದ ಕಾರಣ ವಿಷ್ಣು ಅವರನ್ನು ಸಂಪರ್ಕಿಸಿ ಈ ಬಾರಿ ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಗೆ ಹಾಕಬೇಕು ಎಂದು ತಿಳಿಸಿ ಆ ನಂತರ ಅವರನ್ನು ನಿರಂತರ ಸಂಪರ್ಕ ಇಟ್ಟುಕೊಂಡು ಕಡೆಗೂ ಇಂದು ತೀರ್ಥಹಳ್ಳಿಗೆ ಪರಶುರಾಮನ ಎಂಟ್ರಿ ಆಗುವ ಹಾಗೆ ಮಾಡಿದ್ದಾರೆ.

ಇಂದು ತುಂಗಾ ನದಿಯ ತೀರದಲ್ಲಿ ಪರಶುರಾಮನ ಪ್ರತಿಮೆ ಹಾಕಲಾಗುತ್ತಿದ್ದು ನಾಳೆಯಿಂದ ಇದು ಸಹ ಒಂದು ಸೆಲ್ಫಿ ಪಾಯಿಂಟ್ ಆಗುವ ಸಾಧ್ಯತೆ ಇದೆ. ತನ್ನ ತಾಯಿಯ ಹತ್ಯೆ ಮಾಡಿದ ಪಾಪ ಪರಿಹಾರ ತೊಳೆದುಕೊಂಡ ಪರಶುರಾಮನ ರೀ ಎಂಟ್ರಿ ಪ್ರತಿಮೆ ಮೂಲಕ ಈ ಬಾರಿ ಆಗಿದೆ...




Previous Post Next Post