ಎಳ್ಳಮಾವಾಸ್ಯೆ ಜಾತ್ರೆಗೆ ದಿನಗಣನೆ ಆರಂಭ
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಡಿ. 19 ರಿಂದ ಮೂರು ದಿನಗಳ ಪರ್ಯಂತ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಲಿದೆ. ಡಿ. 19 ರಂದು ತೀರ್ಥಸ್ನಾನ, ಡಿ. 20 ರಂದು ಮನ್ಮಹಾರಥೋತ್ಸವ ಹಾಗೂ ಡಿ. 21 ರಂದು ತೆಪ್ಪೋತ್ಸವ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಅದ್ದೂರಿ ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ.
ಈ ಬಾರಿ ಸಹ ಬಿ. ಕಾಂ ಪರೀಕ್ಷೆ,, ಆದರೆ ಒತ್ತಡ ಇಲ್ಲ ಎನ್ನುತ್ತಿರುವ ರಾಮೇಶ್ವರ...
ಕಳೆದ ಬಾರಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಸೇರಿ ಜಾತ್ರೆ ಮಾಡಲು ತೀರ್ಮಾನಿಸಿ ದ್ದರು. ಇದರಿಂದ ಜಾತ್ರೆಗೂ ಮೊದಲು ಹಲವು ವಾದ- ವಿವಾದ ಕೇಳಿ ಬಂದಿತ್ತು. ಆ ನಂತರ ಬಿ. ಕಾಂ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದ ರಾಮೇಶ್ವರ ಮೊದಲ ಸೆಮಿಸ್ಟರ್ ಪಾಸ್ ಆಗಿದ್ದ, ಈಗ ಎರಡನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಮುಂದಾಗಿದ್ದು ಈ ಬಾರಿ ಯಾವುದೇ ಒತ್ತಡ ಇಲ್ಲದಂತೆ ಕಾಣಿಸುತ್ತಿದೆ.
ಕಳೆದ ಬಾರಿಗಿಂತ ಈ ಬಾರಿ ವಿಶೇಷ
ಜಾತ್ರೆ ಎಂದರೆ ಸಾಕು ಹೊರ ಭಾಗದಿಂದ ಲಕ್ಷಾಂತರ ಜನರು ತೀರ್ಥಹಳ್ಳಿಗೆ ಆಗಮಿಸುತ್ತಾರೆ. ಅದರಲ್ಲೂ ತೆಪ್ಪೋತ್ಸವ ದಿನ ತುಂಗಾ ನದಿಯಲ್ಲಿ ತೆಪ್ಪದಲ್ಲಿ ಕುಳಿತಿರುವಂತಹ ರಾಮೇಶ್ವರ ದೇವರನ್ನು ನೋಡಲು ಒಂದಡೆಯಾದರೆ ತುಂಗಾ ನದಿಯ ಒಂದು ಭಾಗದಲ್ಲಿ ಸಿಡಿಯುವಂತ ಸಿಡಿ ಮದ್ದನ್ನು ನೋಡುವುದೇ ಕಣ್ಣಿಗೆ ಆನಂದ, ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಸಿಡಿಮದ್ದಿನ ಜೇಂಕಾರವೂ ಮತ್ತಷ್ಟು ರಂಗೇರಿಸಲಿದೆ.
ಇದನ್ನು ಓದಿ - ಈ ಬಾರಿ " ರಾಘು" ನೇತೃತ್ವದಲ್ಲಿ " ಸುಂದರ " ಜಾತ್ರೆ
ಈಗಾಗಲೇ ಜಾತ್ರಾ ಸಮಿತಿಯಿಂದ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಇನ್ನೊಂದೆರಡು ದಿನಗಳಲ್ಲಿ ರಾಮೇಶ್ವರ ದೇವರ ಜಾತ್ರಾ ಸಮಿತಿಯಿಂದ ಹೊರೆ ಕಾಣಿಕೆ ವಾಹನಗಳು ತಾಲೂಕಿನ ಮೂಲೆ ಮೂಲೆಗೆ ಸಂಚರಿಸಲಿದೆ. ಪ್ರತಿದಿನ ಹೊರ ಕಾಣಿಕೆ ವಾಹನಗಳು ಯಾವೆಲ್ಲ ಭಾಗದ ಊರುಗಳಿಗೆ ಬರುತ್ತದೆ ಎಂದು ಪ್ರತಿದಿನವೂ ಶಿವಮೊಗ್ಗ ಸುದ್ದಿಯಲ್ಲಿ ಪ್ರಕಟಣೆ ಮಾಡಲಾಗುತ್ತದೆ.
Tags:
ಜಾತ್ರೆ ಸುದ್ದಿ