ಈ ಬಾರಿ " ರಾಘು" ನೇತೃತ್ವದಲ್ಲಿ " ಸುಂದರ " ಜಾತ್ರೆ Jatre

ಈ ಬಾರಿ " ರಾಘು" ನೇತೃತ್ವದಲ್ಲಿ " ಸುಂದರ " ಜಾತ್ರೆ 

ಈ ಬಾರಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಕಣ್ಮನ ಸೆಳೆಯುವ ದೃಶ್ಯಗಳು

ತೀರ್ಥಸ್ನಾನದ ಜೊತೆಗೆ ಪರಶುರಾಮನ ದರ್ಶನ

ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ 
ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತವಾಗಿ ಶ್ರೀರಾಮೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆಯನ್ನ ನಡೆಸಲಾಯಿತು. ಈ ಬಾರಿ ಜಾತ್ರೆಯನ್ನ ಅತ್ಯಂತ ವೈಭವದಿಂದ ಮಾಡಲು ಒಮ್ಮತದಿಂದ ನಿರ್ಧಾರ ಮಾಡಲಾಯಿತು.

ಈ ಬಾರಿ " ರಾಘು" ನೇತೃತ್ವದಲ್ಲಿ " ಸುಂದರ " ಜಾತ್ರೆ 

ತೆಪ್ಪೋತ್ಸವ ಸಮಿತಿಯ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಡಾ. ಸುಂದರೇಶ್ ಅವರ ನೇತೃತ್ವದಲ್ಲಿ ಈ ಬಾರಿ ಅತ್ಯಂತ ವೈಭವದಿಂದ ಎಳ್ಳಮಾವಾಸ್ಯೆ ಜಾತ್ರೆ ನಡೆಯಲಿದೆ. ಕಳೆದ ಎಲ್ಲಾ ವರ್ಷಗಳಿಗಿಂತ ಈ ಬಾರಿ ಅತ್ಯಂತ ವೈಭವದಿಂದ, ಸಂಭ್ರಮ ಸಡಗರದಿಂದ ರಾಮೇಶ್ವರನ ಜಾತ್ರೆಯನ್ನ ಮಾಡಲಾಗುತ್ತಿದೆ. ಈ ಬಾರಿ ಹತ್ತಾರು ವಿಶೇಷತೆಗಳು ಈ ಜಾತ್ರೆಯಲ್ಲಿ ಕಣ್ಮನ ಸೆಳೆಯಲಿದೆ.

ತೀರ್ಥಸ್ನಾನದ ಜೊತೆಗೆ ಪರಶುರಾಮನ ದರ್ಶನ

ಎಳ್ಳಮಾವಾಸ್ಯೆ ಜಾತ್ರೆಯ ಮೊದಲ ದಿನದ ತೀರ್ಥಸ್ನಾನ ಮಾಡುವ ಸಲುವಾಗಿ ಸಾವಿರಾರು ಭಕ್ತರು ಶ್ರೀ ರಾಮಕುಂಡದ ಬಳಿ ಆಗಮಿಸುತ್ತಾರೆ. ತಾಯಿಯನ್ನ ಕೊಂದ ಪಾಪ ಪರಿಹಾರದ ಪುಣ್ಯಸ್ಥಳವಾಗಿರುವಂತಹ ಶ್ರೀರಾಮಕುಂಡದಲ್ಲಿ ಸ್ನಾನವನ್ನು ಮಾಡಿದರೆ  ತಾವು ಮಾಡಿರುವಂತಹ ಎಲ್ಲಾ ಪಾಪಕರ್ಮಗಳು ತೊಳೆದು ಹೋಗುತ್ತದೆ ಎಂಬ ಪ್ರತಿತಿ ಇಲ್ಲಿದೆ. ಅಂತಹ ವೈಶಿಷ್ಟ್ಯವಾದಂತಹ ಕಥೆಯ ಕಾರಣಕರ್ತರಾದ ಪರುಶುರಾಮನ ದರ್ಶನ ಈ ಬಾರಿ ರಾಮಕುಂಡದ ಸಮೀಪ ಅಗಲಿದೆ.

 ಕಣ್ಮನ ಸೆಳೆಯುವ ವಿದ್ಯುತ್ ದೀಪ ಅಲಂಕಾರ 

ಇಡೀ ತೀರ್ಥಹಳ್ಳಿ ಪಟ್ಟಣ ಜಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯಲಿದೆ. ತುಂಗಾ ನದಿಯ ಒಂದು ಭಾಗದ ಮರಳು ದಂಡೆಯ ಮೇಲೆ ವಿಶೇಷವಾದಂತಹ ದೀಪಾಲಕೃತವಾದಂತಹ ಆಕೃತಿ ನಿರ್ಮಾಣಗೊಳ್ಳಲಿದೆ. ಕಳೆದ ಬಾರಿ ಆದಿ ಯೋಗಿಯ ದೀಪಾಲಂಕೃತವಾದಂತಹ ಆಕೃತಿ ಜನರ ಕಣ್ಮನ ಸೆಳೆದಿತ್ತು.
ಈ ಬಾರಿ ಸಹ ಅದೇ ರೀತಿ ಆದಂತಹ ವಿದ್ಯುತ್ ದೀಪಾಲಂಕೃತವಾದಂತಹ ಆಕೃತಿ ನಿರ್ಮಾಣಗೊಳ್ಳಲಿದೆ.

ಆಗಸದಲ್ಲಿ ಸಿಡಿಮದ್ದಿನ ಜೇಂಕಾರ 

ಎಳ್ಳಮಾವಾಸ್ಯೆ ಜಾತ್ರೆಯ ತೆಪ್ಪೋತ್ಸವದಂದು ಲಕ್ಷಾಂತರ ಜನ ಸೇರಿ ಅತ್ಯಂತ ಕಾತರದಿಂದ ಕಾಯುವಂತಹ ಸಿಡಿಮದ್ದಿನ ಜೇಂಕಾರ ಈ ಬಾರಿ ಮತ್ತಷ್ಟು ಕಣ್ಮನ ಸೆಳೆಯುವ ಸಾಧ್ಯತೆಯಿದೆ. ಕಳೆದ ಬಾರಿಗಿಂತಲೂ ಈ ಬಾರಿಜಾಸ್ತಿ ಸಿಡಿಮದ್ದನ್ನ ಸಿಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹಾಗೂ ಜಾತ್ರೆಯ ಪ್ರಯುಕ್ತವಾಗಿ ಮೂರು ದಿನಗಳ ಕಾಲ ಲಕ್ಷಾಂತರ ಮಂದಿಗೆ ಅನ್ನ ಸಂತರ್ಪಣೆ ನಡೆಯಲಿದೆ.
Previous Post Next Post