ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಶಾಲಾ ವಿದ್ಯಾರ್ಥಿಗಳು Vagdevi

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಶಾಲಾ ವಿದ್ಯಾರ್ಥಿಗಳು

ತೀರ್ಥಹಳ್ಳಿ:  ದಿನಾಂಕ 28.11.2025 ರಂದು
ಶಾಲಾ ಶಿಕ್ಷಣ ಇಲಾಖೆಯವರು ಡಾ|| ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯಲ್ಲಿ ನಡೆಸಿದ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಅನೇಕ ಬಹುಮಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.

01 ಜಾನಪದ ನೃತ್ಯ-  ದಿತಿ ಹೆಚ್ ಎಸ್, ಅವನಿ ಬಿ ಎ, ಪ್ರಾಂಜಲಿ ಆರ್ ಹೆಬ್ಬಾರ್, ವಾಗ್ಮಿ ಎಸ್.ಜೆ, ಅನುಷ್ಕಾ ಆರ್ ನಾಯಕ್, ಅನ್ವಿಕಾ ಕೆ, ಶ್ರೀಕರ, ಅಜಿತ್ ಬಿ ಎ - ಪ್ರಥಮ ಸ್ಥಾನ

02  ಇಂಗ್ಲೀಷ್ ಭಾಷಣ- ಅವಿತ್ರಿ ಹೆಚ್ ಎಸ್ -  ಪ್ರಥಮ ಸ್ಥಾನ

03 ಸಂಸ್ಕೃತ ಭಾಷಣ- ದರ್ಶಿನಿ ಕೆ ಎನ್ - ಪ್ರಥಮ ಸ್ಥಾನ

04 ಅರೇಬಿಕ್ ಧಾರ್ಮಿಕ ಪಠಣ - ಆಮ್ನಾ ಝಲೀಫಾ - ಪ್ರಥಮ ಸ್ಥಾನ

05 ಸಂಸ್ಕೃತ ಧಾರ್ಮಿಕ ಪಠಣ - ಗಾನಶ್ರೀ ಎಂ ಜಿ - ಪ್ರಥಮ ಸ್ಥಾನ

06  ಹಿಂದಿ ಭಾಷಣ - ತನ್ವಿ ಇ ಕೆ - ದ್ವಿತೀಯ ಸ್ಥಾನ

07 ಭಾವಗೀತೆ -  ಆತ್ಮಿಕಾ ಜಿ ಭಟ್ -  ದ್ವಿತೀಯ ಸ್ಥಾನ

08 ಭರತನಾಟ್ಯ - ವಾಗ್ಮಿ ಎಸ್.ಜೆ - ದ್ವಿತೀಯ ಸ್ಥಾನ

09 ರಸಪ್ರಶ್ನೆ -  ಪಾರ್ಥ ಎಂ.ಆರ್ ಮತ್ತು ಅನಘ ಕೆ.ಎಸ್
ತೃತೀಯ ಸ್ಥಾನ

ಇವರ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಶಿಕ್ಷಕ ವೃಂದ ಮತ್ತು ಪೋಷಕರು ಅಭಿನಂದಿಸಿ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿಯೂ ಸಹ ಬಹುಮಾನಗಳನ್ನು ಗೆಲ್ಲಲಿ ಎಂದು ಶುಭ ಹಾರೈಸಿರುತ್ತಾರೆ.
Previous Post Next Post