ಸಹ್ಯಾದ್ರಿ ಐಸಿಎಸ್ಇ ಶಾಲೆಯಲ್ಲಿ ಅದ್ಧೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ
ತೀರ್ಥಹಳ್ಳಿ : ದಿನಾಂಕ 15-11-2025 ರಂದು ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್ಇ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದರಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಹಾಗೂ ಸುಂದರವಾಗಿ ಮೂಡಿಬರಲು
ಕಾರಣರಾದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಅಂಟಿಗೆ ಪಿಂಟಿಗೆ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಮಲೆನಾಡಿನ ಮತ್ತು ಕರ್ನಾಟಕದ ಬೇರೆ ಬೇರೆ ಪ್ರದೇಶಗಳ ವೇಷಭೂಷಣಗಳ ಪ್ರದರ್ಶನ, ಸಾಂಪ್ರದಾಯಿಕ ಒಕ್ಕಲಾಟ, ಯಕ್ಷಗಾನ, ಪಟಾಣಿಗಳಿಂದ ನೃತ್ಯ, ಮಲೆನಾಡಿನ ರೈತರ ಜೀವನದ ಬಗ್ಗೆ ಕಿರು ನಾಟಕ ಹೀಗೆ ವಿವಿಧ ಮನೋರಂಜನೆ ಹಾಗೂ ಉತ್ತಮ ಅಭಿರುಚಿಯ, ಸಂದೇಶ ನೀಡುವ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೂಳೂರು ಕೃಷ್ಣಮೂರ್ತಿ ವಹಿಸಿದ್ದರು. ಹಾಗೂ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ನಿಕಟ ಪೂರ್ವ
ಅಧ್ಯಕ್ಷರಾದ ಬಾಳೆಹಳ್ಳಿ ಪ್ರಭಾಕರ್, ಮಾಜಿ ಅಧ್ಯಕ್ಷರಾದ ಸುಜಿನಿ ಕ.ವಿ., ನಿಕಟಪೂರ್ವ ಸಹಕಾರ್ಯದರ್ಶಿಯಾದ ಧನ್ಯ ಅಶ್ವಲ್, ನಿರ್ದೇಶಕರಾದ ಚೇತನಾ ನಂದನ್
ಹಾಗೂ ಸಂದೀಪ್ ಕುಡುಮಲ್ಲಿಗೆ ಹಾಜರಿದ್ದರು.
Tags:
ತೀರ್ಥಹಳ್ಳಿ ಸುದ್ದಿ