ರಸ್ತೆ ಬದಿಯಲ್ಲಿ ಬಿದ್ದಿರುವ ವಿದ್ಯುತ್ ಲೈನ್ - ಕಣ್ಮುಚ್ಚಿ ಕುಳಿತ ಮೆಸ್ಕಾಂ ಇಲಾಖೆ..!
ತೀರ್ಥಹಳ್ಳಿ : ವಿದ್ಯುತ್ ಕಂಬ ವಾಲಿ ಅದರ ವಿದ್ಯುತ್ ಲೈನ್ ಗಳು ಸಂಪೂರ್ಣ ನೆಲಕ್ಕೆ ಮುಟ್ಟುವ ಸ್ಥಿತಿ ಬಂದಿದ್ದರು ಸಹ ಇಲ್ಲಿಯವರೆಗೆ ಯಾವುದೇ ಮೆಸ್ಕಾಂ ಅಧಿಕಾರಿಗಳು ಗಮನಿಸದೆ ಇರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ತೀರ್ಥಹಳ್ಳಿಯಿಂದ ನಗರ ಸಂಪರ್ಕಿಸುವ ರಸ್ತೆಯ ಟೆಂಕ್ ಬೈಲ್ ಸಮೀಪ ರಸ್ತೆಯ ಬದಿಯಲ್ಲಿ ನೆಲಕ್ಕೆ ವಿದ್ಯುತ್ ಲೈನ್ ಬೀಳುವ ಪರಿಸ್ಥಿತಿ ಬಂದಿದೆ. ರಸ್ತೆ ಬದಿಯಲ್ಲಿ ಜಾನುವಾರುಗಳು ಓಡಾಡುತ್ತಾವೆ. ಆ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಈಗಾಗಲೇ ಈ ವಿಚಾರ ಸ್ಥಳೀಯರು ಮೆಸ್ಕಾಂ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ದುರಸ್ಥಿ ಮಾಡುವ ಕೆಲಸ ಮಾಡಲಿಲ್ಲ. ಬೇಜವಾಬ್ದಾರಿ ವರ್ತನೆ ಮಾಡುತ್ತಿದ್ದಾರೆ.
ಕರೆಂಟ್ ಶಾಕ್ ಹೊಡೆಸಿಕೊಂಡು ಯಾರಿಗಾದರೂ ಏನಾದರು ಆದರೆ ಮಾತ್ರ ಸರಿಪಡಿಸಲು ಬರಬಹುದೇನೋ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿಯಲ್ಲಿ ವಿದ್ಯುತ್ ಲೈನ್ ನೆಲಕ್ಕೆ ತಾಗುತ್ತಿದ್ದು ಈ ಕೂಡಲೇ ಮೆಸ್ಕಾಂ ಅಧಿಕಾರಿಗಳು ಗಮನಿಸಿ ವಿದ್ಯುತ್ ಲೈನ್ ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ