ರಸ್ತೆ ಕಾಮಗಾರಿ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ರೋಡ್ ರೋಲರ್- ತಪ್ಪಿದ ಅವಘಡ..! tth

ರಸ್ತೆ ಕಾಮಗಾರಿ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ರೋಡ್ ರೋಲರ್- ತಪ್ಪಿದ ಅವಘಡ..!

ತೀರ್ಥಹಳ್ಳಿ : ರಸ್ತೆ ಕಾಮಗಾರಿ ಮಾಡುತ್ತಿರುವ ವೇಳೆ ರೋಡ್ ರೋಲರ್  ಹಿಂಭಾಗ ಏಕಾಏಕಿ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದ ಘಟನೆ ಪಟ್ಟಣದ ಸೊಪ್ಪುಗುಡ್ಡೆಯಲಿ ನಡೆದಿದೆ.

 ರಸ್ತೆ ಸಂಪೂರ್ಣ ಹೋಂಡಾ ಗುಂಡಿಯಾಗಿರುವ ಕಾರಣ ಇಂದು ರಸ್ತೆ ಕಾಮಗಾರಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ  ರೋಡ್ ರೋಲರ್ ನಿಲ್ಲಿಸಿದ್ದ ವೇಳೆ ಚಾಲಕನಿಲ್ಲದೆ ಏಕಾಏಕಿ ಹಿಂಭಾಗ ಸಲ್ಲಿಸಿ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ಆನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಹೈ ಟೆನ್ಶನ್ ವೈಯರ್ ಇರುವ ವಿದ್ಯುತ್ ಕಂಬವಾಗಿದ್ದು ಯಾವುದೇ ಅವಘಡವ ಸಂಭವಿಸಿಲ್ಲ.

 ಅನುರಾಧ ನರ್ಸಿಂಗ್ ಹೋಮ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು  ರಸ್ತೆಯ ಒಂದು ಭಾಗ ಸಂಪೂರ್ಣ ಇಳಿಜಾರಿನಿಂದ ಕೂಡಿದೆ. ಇಂತಹ ಸಂದರ್ಭದಲ್ಲಿ  ಕೆಲಸ ನಿರ್ವಹಿಸುವವರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಅವಿದ್ಯುತ್ ಕಂಬದ ಬದಲಾಗಿ ರಸ್ತೆಯಲ್ಲಿ ಓಡಾಡುವವರಿಗೆ ಏನಾದರೂ ಡಿಕ್ಕಿಯಾಗಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ..


Previous Post Next Post