ದೇವರ ಹೆಸರಲ್ಲಿ ದುಡ್ಡು ಮಾಡ್ತಿರುವ ದಂಧೆಕೋರರು..! Tth

ದೇವರ ಹೆಸರಲ್ಲಿ ದುಡ್ಡು ಮಾಡ್ತಿರುವ ದಂಧೆಕೋರರು..!

ಮರಳು ಮಾಫಿಯ ನಡೆಯುತ್ತಿದ್ದರು ಕಣ್ಮುಚ್ಚಿ ಕುಳಿತಿರುವ ಪೊಲೀಸ್ ಇಲಾಖೆ ಮತ್ತು ಗಣಿ ಇಲಾಖೆ ಅಧಿಕಾರಿಗಳು..!
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಎಗ್ಗಿಲ್ಲದೇ ಮರಳು ಮಾಫಿಯ ನಡೆಯುತ್ತಿದೆ. ಮರಳು ಮಾಫಿಯ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿರುವ ಮರಳು ದಂಧೆಕೋರರು ಈಗ ದೇವರ ಹೆಸರಿನಲ್ಲಿ ಮರಳು ಮಾಫಿಯಾ ನಡೆಸುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ.

ಕುಶಾವತಿ ಬಳಿಯಿಂದ ಮರಳು ತೆಗೆದುಕೊಂಡು ಲಾರಿಗಳಲ್ಲಿ  ಟ್ರಿಪ್ ಗಟ್ಟಲೆ ಮರಳು ಸಾಗಿಸುತ್ತಿದ್ದಾರೆ. ಕೇಳಿದರೆ ದೇವಸ್ಥಾನದ ಕಾಮಗಾರಿಗೆ, ಶಾಲೆಗೆ ಎಂದು ಸಾಬೂಬು ಉತ್ತರ ನೀಡುತ್ತಾರೆ. ಸಂಬಂಧಪಟ್ಟವರಿಗೆವಿಷಯ ಕೇಳಿದರೆ   ಜಾಣ ಉತ್ತರ ನೀಡುತ್ತಾರೆ. ಮರಳು ಮಾಫಿಯಾಕ್ಕೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಎಲ್ಲವೂ ಕೂಡ ಸಹ ಮತ ನೀಡಿರುವುದರಿಂದಲೇ ಎಗ್ಗಿಲ್ಲದೇ ಮರಳು ಸಾಗಾಟ ನಡೆಯುತ್ತಿದೆ. ಆದರೆ ಈ ವಿಚಾರದಲ್ಲಿ ಮಾತ್ರ ಮೂರು ಇಲಾಖೆಯ ಅಧಿಕಾರಿಗಳು ಕೂಡ ಮೌನವಹಿಸಿರುವುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಮರಳು ಮಾಫಿಯಾದಲ್ಲಿ ದೊಡ್ಡ  ದೊಡ್ಡ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಈ ಕಾರಣದಿಂದಲೇ ದೇವಸ್ಥಾನ ಹಾಗೂ ಶಾಲೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬೇರೆ ಬೇರೆ ಕಡೆ ಮರಳು ಸಾಗಾಟ ಮಾಡಿ ದಂಧೆ ಕೋರರು ಜನಜಣ ಕಾಂಚಣ ಮಾಡಿಕೊಳ್ಳುತ್ತಿದ್ದಾರೆ  ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಮರಳು ಸಾಗಾಟದಿಂದ ರಸ್ತೆಯ ಮೇಲೆಲ್ಲಾ ಮರಳುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದರಿಂದ ವಾಹನ ಸವಾರರು ಶಾಲಾ ವಿದ್ಯಾರ್ಥಿಗಳು ಪಟ್ಟಣದ ಸರಿಗಮ ಹೋಟೆಲ್ ಸಮೀಪ ಬಿದ್ದಿರುವ ಘಟನೆ ಕೂಡ ಇಂದು ನಡೆದಿದೆ. 

ಈ ಕೂಡಲೇ ಸಂಬಂಧಪಟ್ಟಂತಹ ಅಧಿಕಾರಿಗಳು ಮರಳು ಮಾಫಿಯಾಕ್ಕೆ ಬ್ರೆಕ್ ಹಾಕದಿದ್ದರೆ ಏನೇ ಅನಾಹುತವಾದರೂ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಸಾರ್ವಜನಿಕರ ವಲಯದಿಂದ ಆಕ್ರೋಶದ ಮಾತು ಕೇಳಿ ಬಂದಿದೆ..



Previous Post Next Post