ಪೊಲೀಸ್ ವಸತಿ ಗೃಹದಿಂದ ವಿಶೇಷ ಪ್ರವಾಸ - ಸಂಭ್ರಮಿಸಿದ ಪೊಲೀಸ್ ಕುಟುಂಬ tth

ಪೊಲೀಸ್ ವಸತಿ ಗೃಹದಿಂದ ವಿಶೇಷ ಪ್ರವಾಸ - ಸಂಭ್ರಮಿಸಿದ ಪೊಲೀಸ್ ಕುಟುಂಬ
ತೀರ್ಥಹಳ್ಳಿ : ಸಾರ್ವಜನಿಕರ ಅನುಕೂಲಕ್ಕಾಗಿ ಸದಾ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಪೊಲೀಸ್ ಇಲಾಖೆಯ ಅಧಿಕಾರಿಗಳು ತಮ್ಮ ಕುಟುಂಬದ ಜೊತೆಗೆ ಸಮಯ ಕಳೆಯುವುದು ತೀರ ವಿರಳ. ಇಂತಹ ಸಂದರ್ಭದಲ್ಲಿ ಪೊಲೀಸ್ ವಸತಿ ಗೃಹದಿಂದ ಪೊಲೀಸ್ ಕುಟುಂಬದ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಪ್ರವಾಸವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಪೊಲೀಸ್ ಕುಟುಂಬ ಸಂಭ್ರಮಿಸಿದರು.

9 - 11 - 2025 ರ ಭಾನುವಾರ ಕುಂದಾಪುರ ಸಮೀಪದ ಟಿನ್ ಟಾನ್ ಅಡ್ವೆಂಚರ್ ರೆಸಾರ್ಟ್ ಗೆ ಪ್ರವಾಸ ಏರ್ಪಡಿಸಲಾಗಿತ್ತು. ನಿವೃತ್ತಿ ಆಗಿದ್ದ ಪೊಲೀಸ್ ಕುಟುಂಬ ಹಾಗೂ ಹಾಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಕುಟುಂಬ ಈ ಪ್ರವಾಸದಲ್ಲಿ ಭಾಗಿಯಾಗಿದ್ದರು. ಒಂದು ದಿನದ ಈ ಪ್ರವಾಸದಲ್ಲಿ ಮಹಿಳಾ ಪೊಲೀಸರು, ಪೊಲೀಸ್ ಕುಟುಂಬ ಭಾಗಿಯಾಗಿ ಸಂಭ್ರಮಿಸಿದರು.



Previous Post Next Post