ಕುರ್ಚಿಗೆ ಹಾರ ಹಾಕಿ ಬಿಜೆಪಿಯಿಂದ ಪ್ರತಿಭಟನೆ bjp protest

ಕುರ್ಚಿಗೆ ಹಾರ ಹಾಕಿ ಬಿಜೆಪಿಯಿಂದ ಪ್ರತಿಭಟನೆ 

ಕಾಂಗ್ರೆಸ್ ಪಕ್ಷದಿಂದ ಕುರ್ಚಿಗಾಗಿ ಕಿತ್ತಾಟ  ಎಂದು ಬಿಜೆಪಿ ವ್ಯಂಗ್ಯ..!

ತೀರ್ಥಹಳ್ಳಿ: ಪಟ್ಟಣ ಪಂಚಾಯತ್ ನಲ್ಲಿ ಕುರ್ಚಿ ವಿಚಾರವಾಗಿ ಕಿತ್ತಾಟ ನಡೆಯುತ್ತಿದೆ. ಇದರಿಂದ ಪಟ್ಟಣದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಖಾಲಿ ಕುರ್ಚಿ ಇಟ್ಟು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಕಿತ್ತಾಟ ಬಿಡಿ ಪಟ್ಟಣ ಕ್ಲಿನ್ ಮಾಡಿ ಎಂದು ವ್ಯಂಗ್ಯ ಮಾಡಿ ಪ್ರತಿಭಟನೆ ಮಾಡಲಾಗುತ್ತಿದೆ.

ಸೋಮವಾರ ಬೆಳಗ್ಗೆ ಬಿಜೆಪಿ ವತಿಯಿಂದ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಕಚೇರಿ ಎದುರು ಪಟ್ಟಣದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸಮಸ್ಯೆ ನೂರಾರು ಇದೆ. ಆದರೆ ಅದನ್ನೆಲ್ಲ ಬಿಟ್ಟು ಕುರ್ಚಿಗಾಗಿ ಕಿತ್ತಾಟ ನಡೆಸಲಾಗುತ್ತಿದೆ. ಕುರ್ಚಿ ಆಸೆಯಿಂದ ಅಧ್ಯಕ್ಷರು ಇಲ್ಲದೆ ಪಟ್ಟಣದಲ್ಲಿ ಕೆಲಸಗಳು ಇಲ್ಲದಂತೆ ಆಗಿದೆ. ಅಷ್ಟೇ ಅಲ್ಲದೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತು.

ಒಟ್ಟಿನಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ಬಿಜೆಪಿ ಸದಸ್ಯರು ಹಾಗೂ ಬಿಜೆಪಿಯ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.




Previous Post Next Post