ತೀರ್ಥಹಳ್ಳಿಯಲ್ಲಿ ವಾಷ್ ಗೆ ಬಿಟ್ಟ ವಾಹನವನ್ನು ಎಸ್ಕೇಪ್ ಮಾಡಿದ ಭೂಪ..! tth

ತೀರ್ಥಹಳ್ಳಿಯಲ್ಲಿ ವಾಷ್ ಗೆ ಬಿಟ್ಟ ವಾಹನವನ್ನು ಎಸ್ಕೇಪ್ ಮಾಡಿದ ಭೂಪ..!

ತೀರ್ಥಹಳ್ಳಿ :  ಪಟ್ಟಣದಲ್ಲಿ ವಾಶ್ ಗೆ ಬಿಟ್ಟ ಲಾರಿಯನ್ನೇ ಕಳ್ಳತನ ಮಾಡಿದ ವ್ಯಕ್ತಿ ನಂತರ ಆಗುಂಬೆ ಪೊಲೀಸ್ ರ ಕೈಗೆ ಸಿಕ್ಕಿ ಬಿದ್ದಿದ್ದಾನೆ. 

ನಿಖಿಲ್ ಕುಲಾಲ್ ಎಂಬುವರು ತಮ್ನ ಕೆಎ 15 6186 ಕ್ರಮ‌ಸಂಖ್ಯೆಯ ಐಷರ್ ವಾಹನವನ್ನ ಕುರುವಳ್ಳಿಯ ಉಬೇದ್ ಎಂಬುವರ ಬಳಿ ವಾಶ್ ಗೆ ಬಿಟ್ಟಿದ್ದರು. ವಾಶ್ ಗೆ ಬಿಟ್ಟ ಐಶರ್ ವಾಹನವನ್ನೇ ವ್ಯಕ್ತಿಯೊಬ್ಬ ಕಳುವು ಮಾಡಿಕೊಂಡು ಆಗುಂಬೆ ಕಡೆ ಚಲಿಸಿದ್ದಾನೆ. 

ಈ ಬಗ್ಗೆ ಉಬೇದ್ ಮತ್ತು ವಾಹನ ಮಾಲೀಕ ಕುಲಾಲ್ ತೀರ್ಥಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧಾರದ ಮೇರೆಗೆ ಆಗುಂಬೆಯ ಕೌರಿಹಕ್ಲು ಬಳಿ ವಾಹನ ಸಮೇತ ಸಿಲುಕಿಕೊಂಡಿದ್ದಾನೆ. ವಾಹನ ಮತ್ತು ವಾಹನವನ್ನ‌ ಕದ್ದ ವ್ಯಕ್ತಿಯನ್ನ ಆಗುಂಬೆ ಪಿಎಸ್ಐ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ವಾಪಾಸ್ ಹಸ್ತಾಂತರಿಸಿದ್ದಾರೆ. ವಾಹನ ಕದ್ದವನನ್ನ ನಂದೀಶ್ ಎಂದು ಗುರುತಿಸಲಾಗಿದೆ.‌



Previous Post Next Post