ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್‌ನಭ್ರಷ್ಟ-ನಿಕೃಷ್ಟ ಆಡಳಿತದ ವಿರುದ್ಧ ನಾಳೆ ಬಿಜೆಪಿ ಪ್ರತಿಭಟನೆ muncipal

ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್‌ನ
ಭ್ರಷ್ಟ-ನಿಕೃಷ್ಟ ಆಡಳಿತದ ವಿರುದ್ಧ ನಾಳೆ  ಬಿಜೆಪಿ ಪ್ರತಿಭಟನೆ

ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಕಾಂಗ್ರೆಸ್ ಪಕ್ಷದ ಅಧಿಕಾರ ಕಚ್ಚಾಟ-
ದುರಾಡಳಿತ-ಭ್ರಷ್ಟಾಚಾರ ಊರಿನ ವ್ಯವಸ್ಥೆ ಹಾಳು ಮಾಡುತ್ತಿದೆ. ಕಾಂಗ್ರೆಸ್‌ನ ಭ್ರಷ್ಟ-ನಿಕೃಷ್ಟ ಆಡಳಿತದ ವಿರುದ್ಧ ನ.10ರ ಸೋಮವಾರ ತೀರ್ಥಹಳ್ಳಿ ನಗರ ಬಿಜೆಪಿ ಘಟಕ ಬೃಹತ್‌ ಪ್ರತಿಭಟನಾ ಸಭೆ ಹಮ್ಮಿಕೊಂಡಿದೆ. 

ಬೆಳಗ್ಗೆ 11 ಗಂಟೆಗೆ ಪ.ಪಂ. ಕಾರ್ಯಾಲಯದೆದುರು ಪ್ರತಿಭಟನಾ ಸಭೆ ನಡೆಯಲಿದೆ. ಶಾಸಕ ಆರಗ ಜ್ಞಾನೇಂದ್ರ, ಬಿಜೆಪಿ ಕೌನ್ಸಿಲರ್‌ಗಳು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಪ.ಪಂ.ದುರಾಡಳಿತದಿಂದ ಬೇಸತ್ತ ನಾಗರೀಕರೂ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪಟ್ಟಣ ಪಂಚಾಯತ್ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ತಿಳಿಸಿದ್ದಾರೆ.

ಬಿಜೆಪಿ ಆರೋಪಗಳು ಏನು?

🔸 3 ತಿಂಗಳಿನಿಂದ ಸಭೆ ನಡೆಯದೆ ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತವಾಗಿದೆ.

🔸ಕಾಂಗ್ರೆಸ್ ಕೌನ್ಸಿಲರ್‌ಗಳು ಅಧಿಕಾರ ಕಿತ್ತಾಟದಲ್ಲಿ ಊರ ಹಿತವನ್ನು ಬಲಿ ಕೊಟ್ಟಿದ್ದಾರೆ.

🔸ಕಾಂಗ್ರೆಸ್‌ನವರ ಖುರ್ಚಿ ಹಪಾಹಪಿ ಅಸಹ್ಯ ಹುಟ್ಟಿಸುತ್ತಿದೆ.

🔸ಹೊಳೆ ನೀರನ್ನು ಶುದ್ದೀಕರಿಸದೆ ಕಲುಷಿತ ನೀರನ್ನು ಸರಬರಾಜು ಮಾಡುತ್ತಿದ್ದಾರೆ.

🔸ಪ.ಪಂ.ಕಛೇರಿಯಲ್ಲಿ ಲಂಚಗುಳಿತನ ಮಿತಿ ಮೀರಿದೆ.

🔸ರಸ್ತೆಗಳು ಸಂಪೂರ್ಣ ಹಾಳಾಗಿದೆ ಕಸದ ನಿರ್ವಹಣೆ ಕುಲಗೆಟ್ಟಿದೆ.

🔸ಯಾವುದೇ ಅನುದಾನ ಇಲ್ಲ. ಅನುದಾನ ಬಂದಿದೆ ಎಂದು ಸುಳ್ಳು ಹೇಳಿ ಪ್ರಚಾರ.



Previous Post Next Post