ಮಲೆನಾಡಿನ ಬಹುಮುಖ ಪ್ರತಿಭೆ ಕೃತಿಕಾ - ಇವರ ಸಾಧನೆಗೆ ಇರಲಿ ನಿಮ್ಮ ಹಾರೈಕೆ
ತೀರ್ಥಹಳ್ಳಿ : ಕೊಪ್ಪ ತಾಲ್ಲೂಕಿನ ಭಂಡಿಗಡಿ ಗ್ರಾಮದ ರುಧ್ರಾಕ್ಷಿಬೈಲು ವಾಸಿಯಾದ ಆಶಾ ಇವರ ಸುಪುತ್ರಿಯಾದ ಕೃತಿಕ ಇವರು ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಭಂಡಿಗಡಿಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಕಡುಬಡವ ಕುಟುಂಬದಲ್ಲಿ ಜನಿಸಿರುವ ಈ ಬಾಲಕಿಯ ಸಾಧನೆ ಅಪಾರವಾಗಿದೆ
ಶಾಲಾ ಶೈಕ್ಷಣಿಕ ಇಲಾಖೆಯ ವತಿಯಿಂದ ನಡೆಯುವ ಚೆಸ್ ಪಂದ್ಯಾವಳಿಯಲ್ಲಿ ಸತತ 3 ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇತ್ತೀಚಿಗೆ ಯಾದಗಿರಿಯಲ್ಲಿ ನಡೆದ U-17 ವಿಭಾಗದ ಚೆಸ್ ಪಂದ್ಯಾವಳಿಯಲ್ಲಿ ಅತೀ ಕಡಿಮೆ ಅಂತರದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವಲ್ಲಿ ವಂಚಿತರಾದರೂ ಸಹ ರಾಜ್ಯಕ್ಕೆ 6ನೇ ಸ್ಥಾನ ಪಡೆದಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ಇಷ್ಟೇ ಅಲ್ಲದೆ ಅನೇಕ ಓಪನ್ ಟೂರ್ನಿಗಳಲ್ಲಿ ಭಾಗವಹಿಸಿರುವ ಈ ಬಾಲಕಿ UVO All India Floodlight open Rapid ಚೆಸ್ ಟೂರ್ನಮೆಂಟ್ ಕುಂದಾಪುರ = U-14 = 3rd place, ಮಂಜುಶ್ರೀ ಚಾರಿಟೇಬಲ್ ಟ್ರಸ್ಟ್ ತೀರ್ಥಹಳ್ಳಿ ಟೂರ್ನಮೆಂಟ್ ನಲ್ಲಿ= U-14 =1st place, ಚಾನುಕ್ಯ U-16 ಚೆಸ್ ಟೂರ್ನಮೆಂಟ್= 6th place, ಚಿಕ್ಕಮಗಳೂರು U-16 Open Rupid ಚೆಸ್ ಟೂರ್ನಮೆಂಟ್= U-14= 4th place, ಚಾನುಕ್ಯ U-15 ಚೆಸ್ ಟೂರ್ನಮೆಂಟ್= 4th place, ಚಾನುಕ್ಯ ಚೆಸ್ ಟೂರ್ನಮೆಂಟ್= U-14= 3rd place
1st Like U-16ಚೆಸ್ ಟೂರ್ನಮೆಂಟ್ ಶಿವಮೊಗ್ಗ= 3rd place ಪಡೆದಿದ್ದಾರೆ. ಯಾವುದೇ ಉನ್ನತ ಮಟ್ಟದ ತರಬೇತಿ ಸಿಗದಿದ್ದರೂ ಸಹ ಈ ಎಲ್ಲಾ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಚಿಕ್ಕ ವಯಸ್ಸಿನಲ್ಲೇ ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದಿರುವುದು ಅತ್ಯಂತ ಶ್ಲಾಘನೀಯವಾಗಿದೆ.
ಮಲೆನಾಡಿನ ಹೆಮ್ಮೆಯ ಪ್ರತಿಭೆಯಾಗಿರುವ ಕುಮಾರಿ ಕೃತಿಕ ಚೆಸ್ ಆಟ ಮಾತ್ರವಲ್ಲದೆ ಅತ್ಯುತ್ತಮ ಕಬ್ಬಡ್ಡಿ ಆಟಗಾರ್ತಿಯೂ ಹೌದು. ಕ್ರೀಡೆ ಮಾತ್ರವಲ್ಲದೆ ಅನೇಕ ಪ್ರಬಂದ ಸ್ಪರ್ದೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾಳೆ. ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹರಿಹರಪುರ ಇವರು ಈವರೆಗೆ ಆಯೋಜಿಸಿದ ಪ್ರಬಂದ ಸ್ಪರ್ದೆಗಳಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದಿರುವ ಕೀತಿ೯ ಕೃತಿಕಾಗೆ ಸಲ್ಲುತ್ತದೆ.
ಉತ್ತಮ ನೃತ್ಯಗಾರ್ತಿ ಹಾಗು ಉತ್ತಮ ಹಾಡುಗಾರ್ತಿಯೂ ಆಗಿರುವ ಕುಮಾರಿ ಕೃತಿಕ ಯಕ್ಷಗಾನ ಕಲೆಯನ್ನು ಕಲಿಯುವ ಮೂಲಕ ಭಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ.
ತಂದೆಯ ನೆರಳನ್ನು ಕಾಣದ ಈ ಬಾಲಕಿಗೆ ಆಕೆಯು ತಾಯಿ ಅಂಗನವಾಡಿ ಸಹಾಯಕಿ ಕೆಲಸ ಮಾಡಿಕೊಂಡು ಸಂಜೆ ಸಮಯದಲ್ಲಿ ಒಂದು ದಿನಸಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಅತ್ಯಂತ ಕಷ್ಟದ ಪರಿಸ್ತಿತಿಯಲ್ಲೂ ಸಹ ಮಗಳಿಗೆ ಶಿಕ್ಷಣ ನೀಡುವ ಜೊತೆಗೆ ಈ ಎಲ್ಲಾ ಸಾಧನೆಗೆ ಬೆನ್ನಲುಬಾಗಿ ನಿಂತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಆದರೆ ಈಗ ಈ ನಮ್ಮ ಹೆಮ್ಮೆಯ ಪ್ರತಿಭೆ ಇನ್ನೂ ಹೆಚ್ಚು ಸಾಧನೆ ಮಾಡಲು ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹ ಅತ್ಯಗತ್ಯವಾಗಿದೆ.