ರಾಮೇಶ್ವರ ದೇವರ ರಥದ ಚಕ್ರದ ಕೆಲಸ ಆರಂಭ..!
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಡಿ.19ರಿಂದ ಜಾತ್ರೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ರಥದ ಒಂದು ಚಕ್ರ ದುರಸ್ಥಿ ಆಗಿದ್ದು ಅದರ ಬದಲಾಗಿ ನೂತನ ಚಕ್ರದ ಕೆಲಸಕ್ಕೆ ಇಂದು ಪೂಜೆ ಸಲ್ಲಿಸಿ ಆರಂಭಿಸಲಾಯಿತು.
ಈಗಾಗಲೇ ನೂತನ ಚಕ್ರಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸಿದ್ದು ಧಾರ್ಮಿಕ ವಿಧಿವಿಧಾನ ಸಲ್ಲಿಸಿ ರಥದ ಕೆಲಸ ಮಾಡಲು ಆರಂಭ ಮಾಡಲಾಯಿತು. ಸರಿಯಾಗಿ ಒಂದು ತಿಂಗಳು ಇದ್ದು ಜಾತ್ರಾ ಕೆಲಸಗಳು ಭರದಿಂದ ಸಾಗಲಿದೆ. ಜಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೆರಡು ದಿನಗಳಲ್ಲಿ ಸಭೆ ನಡೆಸಿ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನದ ಬಗ್ಗೆ ಹಾಗೂ ಜಾತ್ರಾ ಮಹೋತ್ಸವದ ಬಗ್ಗೆ ಅಧಿಕೃತ ಸಮಿತಿ ರಚನೆ ಆಗುವ ಸಾಧ್ಯತೆ ಇದೆ.
Tags:
ತೀರ್ಥಹಳ್ಳಿ ಸುದ್ದಿ