ಕುರುವಳ್ಳಿ ಜೋಪಡಿ ಜನಾಂಗಕ್ಕೆ ನಿವೇಶನ ನೀಡಲು ಸರ್ಕಾರ ಆದೇಶ - ರಹಮತ್ ಉಲ್ಲಾ ಅಸಾದಿ muncipal

ಕುರುವಳ್ಳಿ ಜೋಪಡಿ ಜನಾಂಗಕ್ಕೆ ನಿವೇಶನ ನೀಡಲು ಸರ್ಕಾರ ಆದೇಶ - ರಹಮತ್ ಉಲ್ಲಾ ಅಸಾದಿ


ತೀರ್ಥಹಳ್ಳಿ : ಅವಿಶ್ವಾಸ ನಿರ್ಣಯ ಆದ ನಂತರ ಯಾವುದೇ ಸಭೆ, ಕಾಮಗಾರಿ ಮಾಡುವಂತಿಲ್ಲ. ಆದರೆ ಹಳೆಯ ಕಾಮಗರಿಗಳನ್ನು ಮಾಡಬಹುದು. ಹಾಗಾಗಿ ಜೋಪಡಿ ನಿವಾಸಿಗಳಿಗೆ ನಿವೇಶನ  ನೀಡಿ ಹಕ್ಕುಪತ್ರ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈಗ 19 ಅಲೆಮಾರಿ ಕುಟುಂಬಕ್ಕೆ ಹಕ್ಕುಪತ್ರ ನೀಡುವಂತೆ ಸರ್ಕಾರ ಆದೇಶ ನೀಡಿದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ತಿಳಿಸಿದ್ದಾರೆ.

ಶುಕ್ರವಾರ ಪಟ್ಟಣ ಪಂಚಾಯತ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕುರುವಳ್ಳಿಯ ಜೋಪಡಿ ನಿವಾಸಿಗಳಿಗೆ ಯಾವುದೇ ಮನೆ ಇಲ್ಲದೆ ಜೋಪಡಿಯಲ್ಲಿ ಇದ್ದಾರೆ. ಅವರಿಗೆ ವಿದ್ಯುತ್ ನೀಡಿಲ್ಲ. ಹಾಗಾಗಿ ಅವರಿಗೆ ಬುಕ್ಲಾಪುರ ಬಳಿ ಒಂದು ಎಕರೆ ನಿವೇಶನ ನೀಡಲಾಗಿದೆ. ಚುನಾವಣೆ ಮೊದಲು ಜೋಪಡಿಯಲ್ಲಿ ಮಧುಬಂಗಾರಪ್ಪ ಅವರ ಜನ್ಮದಿನವನ್ನು ಆಚರಿಸಲಾಗಿತ್ತು. ಚುನಾವಣೆ ಗೆದ್ದ ನಂತರ ಅವರಿಗೆ ಮನೆ ಮಾಡಿಕೊಡುವುದಾಗಿ ತಿಳಿಸಿದ್ದರು. ಈಗ 23 ಅಲೆಮಾರಿ ಕುಟುಂಬಕ್ಕೆ ನೀವೇಶನ ನೀಡುವಂತೆ ತಿಳಿಸಲಾಗಿತ್ತು. ಆದರೆ 19 ಕುಟುಂಬಕ್ಕೆ ಹಕ್ಕುಪತ್ರ ನೀಡಲು ಸರ್ಕಾರ ಆದೇಶ ನೀಡಿದೆ ಎಂದರು..

ಈಗಾಗಲೇ ಹಲವು ಕಾಮಗಾರಿ ಮಾಡಲಾಗುತ್ತಿದೆ. ಕುವೆಂಪು ರಂಗಮಂದಿರವನ್ನು ಮಾಡಲು ಯೋಜನೆ ರೂಪಿಸಲಾಗಿದೆ..
ನಾವು ಕುರ್ಚಿ ಮೇಲೆ ಕುಳಿತು ಕಾಲಹರಣ ಮಾಡುತ್ತಿಲ್ಲ. ಬಡವರಿಗೆ ಆಶ್ರಯ ನೀಡಬೇಕು ಎಂಬುದು ನನಗೆ ಆಸೆ ಇತ್ತು. ಆ ಕೆಲಸ ಆಗುತ್ತಿದೆ. ಇನ್ನಷ್ಟು ಜನರಿಗೆ ಆಶ್ರಯ ನಿವೇಶನ ನೀಡಬಹುದು. ಅದಕ್ಕೆ ಕೆಲವೊಂದು ಜಾಗ ಸಹ ನಿಗದಿ ಮಾಡಲಾಗಿದೆ. ನಮ್ಮ ಸರ್ಕಾರ ಇರುವುದರಿಂದ ಅಧಿಕಾರಿಗಳಿಗೆ ಹೇಳಿ ಆದಷ್ಟು ಬೇಗ ಕೆಲಸ ಮಾಡಿಸಬಹುದು. ಇನ್ನು 11 ತಿಂಗಳು ಪಟ್ಟಣ ಪಂಚಾಯತ್ ನಲ್ಲಿ ಆಡಳಿತ ಇದೆ. ಅಷ್ಟರೊಳಗೆ ಆದಷ್ಟು ಆಶ್ರಯ ನಿವೇಶನ  ಕೊಡುವ ಕೆಲಸ ಆಗಬೇಕಿದೆ ಎಂದರು.

ನನ್ನ 24 ವರ್ಷಗಳ ರಾಜಕೀಯ ಜೀವನದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ರಾಜಿಕೀಯ ಏನೇ ಇರಬಹುದು ಆದರೆ ನನ್ನ ಕನಸಿನಂತೆ ಆಶ್ರಯ ನಿವೇಶನ ನೀಡಿದ್ದೇವೆ. ಇನ್ನು ಕುವೆಂಪು ರಂಗಮಂದಿರ ಇದೆ ಅದು ಸಹ ಆಗಲಿದೆ. ಮುಂದೆ ಚುನಾವಣೆ ನಿಲ್ಲುತ್ತೆವೋ? ಅಥವಾ ಗೆಲುವು ಸೋಲು ಬೇರೆ ಆದರೆ ಈಗಿನ ಸಂದರ್ಭದಲ್ಲಿ ನಾನು ಕೆಲಸ ಮಾಡಿದ್ದೇನೆ ಎಂಬ ಸಂತೋಷ ಇದೆ ಎಂದರು.


Previous Post Next Post