ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ 'ಗಾತಾ ರಹೇ ಮೇರಾ ದಿಲ್' ಸಂಗೀತೋತ್ಸವದಲ್ಲಿ ತೀರ್ಥಹಳ್ಳಿ ಗಾಯಕಿ ಉಷಾ ಬಾಳೆಬೈಲು
ತೀರ್ಥಹಳ್ಳಿ: ಭಾರತೀಯ ಸಿನಿ ಸಂಗೀತ ಲೋಕದ ಅಮರ ಗಾಯಕ ಕಿಶೋರ್ ಕುಮಾರ್ ಅವರಿಗೆ ಗೌರವಾರ್ಥವಾಗಿ, ಷೋಡಶಿ ಫೌಂಡೇಶನ್ ವತಿಯಿಂದ ಕುದ್ಮುಲ್ ರಂಗರಾವ್
ಪುರಭವನದಲ್ಲಿ ನಡೆದ 'ಗಾತಾ ರಹೇ ಮೇರಾ ದಿಲ್' ಸಂಗೀತೋತ್ಸವ ಗೋಲ್ಡನ್ ಬುಕ್ ಆಫ್ ರೆಕಾರ್ಡ ನಲ್ಲಿ
ತೀರ್ಥಹಳ್ಳಿಯ ಹೆಸರಾಂತ ಗಾಯಕಿ ಉಷಾ ಬಾಳೆಬೈಲು ಭಾಗವಹಿಸಿ ಹಾಡುವ ಮುಖಾಂತರ ದಾಖಲೆಗೆ
ಸಹಕರಿಸಿ ಮೆಚ್ಚುಗೆಗೆ ಪಾತ್ರರಾದರು.
ರೆಕಾರ್ಡ್ಸ್ ದಾಖಲಾದ ಬಳಿಕ ನಡೆದ ಅಭಿನಂದನಾ
ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಹೆಡ್ ಮನೀಶ್ ವಿಷ್ಟೋಯಿ ಅಭಿನಂದನಾ
ಪತ್ರ ನೀಡಿದರು. ಗೋಲ್ಡನ್ ಬುಕ್ ಆಫ್ ರೆಕಾರ್ಡ್
ಹೋಲ್ಡರ್ ಹಾಗೂ ಝಿ ಕನ್ನಡ ಸರೆಗಮಪ ಖ್ಯಾತಿಯ ಯಶವಂತ್ ಎಂ.ಜಿ. ಸಾರಥ್ಯದಲ್ಲಿ ಈ ಕಾರ್ಯಕ್ರಮ ನಡೆಯಿತು.
ಮಂಗಳವಾರ ಮುಂಜಾನೆ 2ಕ್ಕೆ ಪ್ರಾರಂಭವಾದ ಸಂಗೀತೋತ್ಸವ ಬುಧವಾರ ಸಂಜೆ 6 ಮುಕ್ತಾಯಗೊಂಡಿದ್ದು, ನಿರಂತರವಾಗಿ 40 ಗಂಟೆಗಳ ಕಾಲ ನಡೆಯಿತು. ಇದರೊಂದಿಗೆ ಆಂಧ್ರಪ್ರದೇಶದಲ್ಲಿ ನಡೆದ 36 ಗಂಟೆಗಳ
ಸಂಗೀತ ಕಾರ್ಯಕ್ರಮವೊಂದರ ದಾಖಲೆ ಅಳಿಸಿ ಹಾಕಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳು ಸೇರಿದಂತೆ ನಾನಾ ಪ್ರದೇಶಗಳಿಂದ 130ಕ್ಕೂ ಹೆಚ್ಚು ಮಂದಿ ಗಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಿಶೋರ್ ಕುಮಾರ್ ಅವರ ಪ್ರಮುಖ ಗೀತೆಗಳನ್ನು ಕರೋಕೆ ಸಂಗೀತದೊಂದಿಗೆ ಹಾಡಿದರು.
Tags:
ತೀರ್ಥಹಳ್ಳಿ ಸುದ್ದಿ