ನ. 22ಕ್ಕೆ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ನಲ್ಲಿ ಸಾಮೂಹಿಕ ನಾಡಗೀತೆ ... tth

ನ. 22ಕ್ಕೆ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ನಲ್ಲಿ ಸಾಮೂಹಿಕ ನಾಡಗೀತೆ
 
ತೀರ್ಥಹಳ್ಳಿ: ನೂರರ ಸಂಭ್ರಮದಲ್ಲಿರುವ ನಾಡಗೀತೆಯ ಆಚರಣೆಗಾಗಿ  ನ. 22 ರ ಶನಿವಾರ ಸಂಜೆ 4:30 ಕ್ಕೆ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತೀರ್ಥಹಳ್ಳಿ ಮತ್ತು ಶಾಲಾ ಶಿಕ್ಷಣ ಇಲಾಖೆ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಮತ್ತು ಸಾಹಿತ್ಯಾಭಿಮಾನಿಗಳ ಸಹಕಾರದೊಂದಿಗೆ ರಾಷ್ಟ್ರಕವಿ ಕುವೆಂಪು ವಿರಚಿತ 
ಜೈ ಭಾರತ ಜನನಿಯ ತನುಜಾತೆ ನಾಡಗೀತೆಯ ನೂರು ವರ್ಷದ ಸಂಭ್ರಮದ ಆಚರಣೆಗಾಗಿ ಈ ಹಾಡನ್ನು ಸಾಮೂಹಿಕವಾಗಿ ಕೊಪ್ಪ ಸರ್ಕಲ್ ನ ಕುವೆಂಪು ಪ್ರತಿಮೆ ಮುಂಭಾಗದಲ್ಲಿ ಒಟ್ಟಾಗಿ ಹಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅತಿಹೆಚ್ಚಿನ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೋರಲಾಗಿದೆ.

ವಿ. ಸೂ.: ಕಾರ್ಯಕ್ರಮವು ಸಮಯಕ್ಕೆ ಸರಿಯಾಗಿ ಆರಂಭವಾಗುವುದರಿಂದ ಎಲ್ಲರೂ ಐದು ನಿಮಿಷ ಮುಂಚಿತವಾಗಿ ಆಗಮಿಸಬೇಕಾಗಿ ಕೋರಿದೆ...
Previous Post Next Post