ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಹೊಸನಗರಕ್ಕೆ ವರ್ಗಾವಣೆ..! Tth

ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಹೊಸನಗರಕ್ಕೆ ವರ್ಗಾವಣೆ..!

ಬಿಇಓ ವರ್ಗಾವಣೆಗೆ ಕಾರಣ ಏನು..!?

ತೀರ್ಥಹಳ್ಳಿ : ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್ ಅವರನ್ನು ಹೊಸನಗರಕ್ಕೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ತೀರ್ಥಹಳ್ಳಿಯಲ್ಲಿ ಬಾರಿ ಕಾಂಟ್ರಾವರ್ಸಿ ಮಾಡಿಕೊಂಡಿದ್ದ ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆ ಮಾಡಲು ಸರ್ಕಾರ ಆದೇಶಿಸಿದೆ. 


ಒಂದು ಪಕ್ಷದ ಜೊತೆ ಇದ್ದಾರೆ ಎಂಬ ದೊಡ್ಡ ಅಪವಾದ ಇವರ ಮೇಲೆ ಕೇಳಿ ಬಂದಿತ್ತು. ಅದರಲ್ಲೂ ಕೇಂದ್ರ ಸರ್ಕಾರದ  ಯೋಜನೆಯನ್ನು ನೀಡುವ ಸಂದರ್ಭದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಜೊತೆಗೆ ಇವರ ಕಚೇರಿ ಎದುರು ಪ್ರತಿಭಟನೆ ಸಹ ಮಾಡಲಾಗಿತ್ತು. ಒಂದು ವಾರ ಕಡ್ಡಾಯವಾಗಿ ರಜೆ ಹಾಕಲು ಸಹ ಡಿಡಿಪಿಐ ಆದೇಶ ಮಾಡಿದ್ದರು. ಈಗ ತೀರ್ಥಹಳ್ಳಿಯಿಂದ ಹೊಸನಗರಕ್ಕೆ ವರ್ಗಾವಣೆ ಮಾಡಲು ಸರ್ಕಾರ ಅದೇಶಿಸಿದೆ.




ವರ್ಗಾವಣೆ ಆಗಲು ಕಾರಣವೇನು?

ಶಿಕ್ಷಣಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ ನಡೆಸಿದಾಗ ವರ್ಗಾವಣೆ ಆಗುವ ಸಾಧ್ಯತೆ ಇತ್ತು. ಆದರೆ ಅಲ್ಲಿ ಜಾತಿ ರಾಜಕಾರಣ ಬಂದ ಕಾರಣ ಆ ವೇಳೆ ವರ್ಗಾವಣೆ ಆಗಿರಲಿಲ್ಲ. ಆದರೆ ಸೋಮವಾರ ಪಟ್ಟಣ ಪಂಚಾಯತ್ ಎದುರು ನಡೆದ ಬಿಜೆಪಿ ಪ್ರತಿಭಟನೆ ವೇಳೆ ಶಿಕ್ಷಣ ಸಚಿವರನ್ನು ಬೈಯುವ ಮೂಲಕ ಹಾಗೂ ಬಿಇಓ ಅವರನ್ನು ಹೊಗಳುವ ಮೂಲಕ ಶಾಸಕರು ಮಾತನಾಡಿದ್ದು ವರ್ಗಾವಣೆಗೆ ಕಾರಣವಯಿತೇ? ಎಂಬ ಮಾತು ಈಗ ಸಾರ್ವಜನಿಕರಿಂದ ಮಾತು ಕೇಳಿ ಬರುತ್ತಿದೆ.



ಒಟ್ಟಿನಲ್ಲಿ ಶಿಕ್ಷಣಾಧಿಕಾರಿಗಳ ವರ್ಗಾವಣೆ ಆಗಿದ್ದು ನೂತನವಾಗಿ ಯಾರು ಬರುತ್ತಾರೆ ಕಾದು ನೋಡಬೇಕಿದೆ..



Previous Post Next Post