ಮಕ್ಕಳಿಗೆ ಬ್ಯಾಗ್ ವಿತರಿಸಿದ ಕಾರ್ಯಕ್ರಮ ಸರ್ಕಾರದ್ದೋ? ಅಥವಾ ಬಿಜೆಪಿಯದ್ದೋ?
ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ರಾ..!?
ತೀರ್ಥಹಳ್ಳಿ : ಶಾಲಾ ಮಕ್ಕಳಿಗೆ ಶುಕ್ರವಾರ ಬ್ಯಾಗ್ ವಿತರಿಸುವ ಕಾರ್ಯಕ್ರಮ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದಿದ್ದು ಈಗ ಈ ಕಾರ್ಯಕ್ರಮದ ಬಗ್ಗೆ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ...
ಅದಕ್ಕೆ ಬಹು ಮುಖ್ಯ ಕಾರಣ, ನಿನ್ನೆ ಸಭೆಯಲ್ಲಿ ನಡೆದ ಕೆಲವೊಂದು ವಿಚಾರಗಳು, ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಲು ಶಿವಮೊಗ್ಗ ಜಿಲ್ಲಾ ಸಂಸದ ಬಿ.ವೈ.ರಾಘವೇಂದ್ರ ಆಗಮಿಸಿದ್ದರು. ಅವರಿಗೆ ಬೆಂಬಲವಾಗಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್ ಹಾಜರಿದ್ದರು.
ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ವಹಿಸಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಸಹ ಮಾಡಲಾಯ್ತು. ತಾಲೂಕಿನ ಬಹುತೇಕ ಶಾಲೆಯ ಮುಖ್ಯಶಿಕ್ಷಕರು,
ಎಸ್‌ಡಿಎಂಸಿ ಅಧ್ಯಕ್ಷರು ಭಾಗವಹಿಸಿದ್ದರು. ಈ ಕಾರ್ಯಕ್ರಮ
ಸರ್ಕಾರದ ವತಿಯಿಂದ ನಡೆಸಲಾದ ಕಾರ್ಯಕ್ರಮವೋ? ಅಥವಾ ಬಿಜೆಪಿ ವತಿಯಿಂದ ಮಾಡಲಾದ ಕಾರ್ಯಕ್ರಮವೋ? ಎಂಬ ಅನುಮಾನ ಈಗ ಪಟ್ಟಣದಲ್ಲಿ ಚರ್ಚೆ ಆಗುತ್ತಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸಾಕ್ಷಾರಥ ಮಿಷನ್ ಯೋಜನೆಯಡಿ ಕಳೆದ ವರ್ಷದ ಮಧ್ಯ ಭಾಗದಲ್ಲಿ ಬ್ಯಾಗ್ ಬಂದಿದ್ದವು. ಈ ಬಾರಿ ಸೈಟರ್ ಬಂದಿದ್ದು ಎರಡನ್ನೂ
ಒಟ್ಟಿಗೆ ಸೇರಿಸಿ ಮಕ್ಕಳಿಗೆ ನೀಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಸಾಕ್ಷಾರಥ ಮಿಷನ್ ಯೋಜನೆಯಡಿ ಕಾರ್ಯಕ್ರಮ ಎಂದಾದರೆ ಅದು ಸರ್ಕಾರಿ ಕಾರ್ಯಕ್ರಮ ಆಗಬೇಕು, ಆದರೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಶಿಷ್ಟಾಚಾರ ಪಾಲನೆ ಮಾಡಿರಲಿಲ್ಲ.
ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರು, ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು
ಬಂಗಾರಪ್ಪ ಅವರನ್ನು ಕರೆಯದೇ ಅದರಲ್ಲೂ ಕಾರ್ಯಕ್ರಮದಲ್ಲಿಸಚಿವರ ಹೆಸರನ್ನು ಕೂಡ
ಪ್ರಸ್ತಾಪ ಮಾಡಲಿಲ್ಲ. ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳೇ ಸ್ವಾಗತ ಭಾಷಣ ಮಾಡಿದ್ದು ಅವರು ಸಹ ಶಿಕ್ಷಣ ಸಚಿವರನ್ನು ನೆನೆಯಲಿಲ್ಲ. ಹಾಗಿದ್ದರೆ ಈ ಕಾರ್ಯಕ್ರಮ ಬಿಜೆಪಿ ಕಾರ್ಯಕ್ರಮವೋ?ಅಥವಾ ಸರ್ಕಾರಿ ಕಾರ್ಯಕ್ರಮವೋ.?
ಎಂಬ ಬಗ್ಗೆ ಇದೀಗ ವ್ಯಾಪಕ ಚರ್ಚೆ ಆರಂಭವಾಗಿದೆ.
ಸರ್ಕಾರಿ ಕಾರ್ಯಕ್ರಮವಾಗದೇ ಇದೊಂದು ಖಾಸಗಿ
ಕಾರ್ಯಕ್ರಮವಾಗಿಯೇ ರೂಪುಗೊಂಡಿದ್ದು ಬಹುತೇಕ ಎಲ್ಲಾ
ಬಿಜೆಪಿ ಮುಖಂಡರನ್ನು ಶಿಕ್ಷಣಾಧಿಕಾರಿಯೇ ಆತ್ಮೀಯವಾಗಿ
ಸ್ವಾಗತಿಸಿದರು. ಪ್ರಸ್ತಾವಿಕವಾಗಿ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ಸಂದೇಶ ಜವಳಿ ಮಾತನಾಡಿದರು. ಸರ್ಕಾರಿ ಕಾರ್ಯಕ್ರಮ ಆದರೆ ಸಂದೇಶ್ ಜವಳಿ ಮಾತನಾಡಿದ್ದು ಸಹ ಶಿಷ್ಟಾಚಾರ ಉಲ್ಲಂಘನೆ ಆದಂತೆ, ಇನ್ನು ಕಾರ್ಯಕ್ರಮ ಆಯೋಜನೆ ಮಾಡಿದ್ದ ಶಿಕ್ಷಣಾಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಮಾತು ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರಿಂದ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಬ್ಯಾಗ್ ಮೇಲೆ ಸರ್ಕಾರದ ಹೆಸರು ಕಾರ್ಯಕ್ರಮ ಮಾತ್ರ ಬಿಜೆಪಿಯದ್ದು
ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
Tags:
ತೀರ್ಥಹಳ್ಳಿ ಸುದ್ದಿ