ಬಿ ಇ ಓ ಗಣೇಶ್ ಗೆ ಕಡ್ಡಾಯ ರಜೆ ಹಾಕಲು ಹಾಗೂ ಶಿಸ್ತು ಕ್ರಮ ಜರುಗಿಸಲು ಡಿಡಿಪಿಐ ಹೇಳಿಕೆ..!
ತೀರ್ಥಹಳ್ಳಿ : ಬಿ.ಇ.ಓ. ಗಣೇಶ್ ರವರು ದಿನಾಂಕ 18-07-2025 ರಂದು ನಡೆದ ಸ್ಕೂಲ್ ಬ್ಯಾಗ್ ಮತ್ತು ಸ್ಪೆಟರ್ ವಿತರಣೆಯನ್ನು ಕದ್ದುಮುಚ್ಚಿ ಕಾರ್ಯಕ್ರಮ ಮಾಡಿ ಹಂಚಿಕೆ ಮಾಡಿರುತ್ತಾರೆ. ಸರ್ಕಾರದ ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಿರುತ್ತಾರೆ ಎಂಬುದಾಗಿ .ಇ.ಓ. ಗಣೇಶ್ ಅವರನ್ನು ಅಮಾನತು ಮಾಡಬೇಕು ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಈ ವಿಚಾರವಾಗಿ ನಂತರ ಡಿಡಿಪಿಐ ಮಂಜುನಾಥ್ ಮಾತನಾಡಿ ಈ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿರುವುದು ಸತ್ಯ. ಹಾಗಾಗಿ ಇದರ ಬಗ್ಗೆ ಸೂಕ್ತ ಕಾನೂನು ತನಿಖೆ ನಡೆಯಬೇಕಿದೆ ಹಾಗಾಗಿ ಒಂದು ವಾರದವರೆಗೆ
ಬಿ.ಇ.ಓ. ಗಣೇಶ್ ಅವರನ್ನು ಕಡ್ಡಾಯವಾಗಿ ರಜೆ ಹಾಕಲು
ತಿಳಿಸಲಾಗಿದೆ . ತನಿಖೆ ನಡೆದ ನಂತರ ಅಮಾನತು ವಿಚಾರ ತಿಳಿಸುವುದಾಗಿ ಡಿಡಿಪಿಐ ಮಂಜುನಾಥ್ ತಿಳಿಸಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ