ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ! yakshagana

ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ  ಯಕ್ಷಗಾನ! 
ತೀರ್ಥಹಳ್ಳಿ : ಪಾವಂಜೆ ನಾಗವೃಜ ಕ್ಷೇತ್ರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರು ಆಡಿ ತೋರಿಸುವ ಕಾಲಮಿತಿ "ಸಂಪೂರ್ಣ ಶ್ರೀ ದೇವಿ ಮಹಾತ್ಮೆ " ಎಂಬ ಯಕ್ಷಗಾನದ ಕಥಾ ಭಾಗವನ್ನು ನವೆಂಬರ್ 11 ರ ಮಂಗಳವಾರ ನ್ಯಾಷನಲ್ ಹೈಸ್ಕೂಲ್ ಮೈದಾನದ ಕೋಣಂದೂರಿನಲ್ಲಿ ಸಂಜೆ 6 ಗಂಟೆಯಿಂದ ನಡೆಯಲಿದೆ. ಎಂದು ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಆ‌ರ್.ಎಂ.ಮಂಜುನಾಥ ಗೌಡ ತಿಳಿಸಿದರು.

ಶನಿವಾರ ಪಟ್ಟಣದ ಮಯೂರ ಹೋಟೆಲ್ ಸಭಾಂಗಣದಲ್ಲಿ  ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಇವರ ಭಾಗವತಿಕೆಯಲ್ಲಿ ಶ್ರೀ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ಕಥಾ ಭಾಗ ಮೂಡಿ ಬರಲಿದೆ. ಸ್ವರ್ಣ ಕಿರೀಟ ಧರಿಸಿ ಅಷ್ಟ ಆಯುಧಗಳೊಂದಿಗೆ ಶ್ರೀದೇವಿಯ ಪ್ರವೇಶ,  ಪ್ರಖ್ಯಾತ ಕಲಾವಿದರ ಭರ್ಜರಿ ಮುಮ್ಮೇಳ, ಅಗ್ನಿ ಜ್ವಾಲೆಯೊಂದಿಗೆ ಚಂಡ ಮುಂಡರ ಅಬ್ಬರದ ಪ್ರವೇಶ, 70 ಕೆಜಿ ರಜತ ಉಯ್ಯಾಲೆಯಲ್ಲಿ ಶ್ರೀ ದೇವಿ ದರ್ಶನ, ರಕ್ತೇಶ್ವರಿ ಕೆನ್ನಾಲಿಗೆಯೊಂದಿಗೆ ರಾಕ್ಷಸರ ವಧೆ  ಮೂಡಿಬರಲಿದೆ ಎಂದರು.

ರಾಜಕೀಯವನ್ನು ಹೊರತುಪಡಿಸಿ ಸಂಗೀತ, ಕ್ರೀಡೆ, ಸಾಹಿತ್ಯ, ಕಲೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಜೊತೆ ಕೋಣಂದೂರು, ತೀರ್ಥಹಳ್ಳಿ, ಹುಂಚ ಭಾಗದ  ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ. ಯಕ್ಷಗಾನ ಪ್ರಿಯರಿಗೆ ಶಾಮಿಯಾನ ವ್ಯವಸ್ಯೆ ಉಪಹಾರ ವ್ಯವಸ್ಥೆ ಇರಲಿದೆ ದಯಮಾಡಿ ಯಕ್ಷಗಾನಪ್ರಿಯರು  ತಾವೆಲ್ಲರೂ ಈ ಯಕ್ಷಗಾನ ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.

ಪತ್ರಿಕಾಗೋಸ್ಟಿಯಲ್ಲಿ ಜಿ ಎಸ್ ನಾರಾಯಣ ರಾವ್, ಡಾ ಸುಂದರೇಶ್, ವಿದ್ಯಾದರ್, ಅಜಿತ್, ದತ್ತಣ್ಣ, ರಾಘವೇಂದ್ರ ಶೆಟ್ಟಿ, ಸೇರಿದಂತೆ ಮತ್ತಿತರು ಇದ್ದರು.



Previous Post Next Post