ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ಸಾನ್ವಿತ ಎ ಶೆಟ್ಟಿ ಚೆಸ್‌ನಲ್ಲಿ ಅಮೋಘ ಸಾಧನೆ - ರಾಷ್ಟ್ರ ಮಟ್ಟಕ್ಕೆ ಆಯ್ಕೆ Sahyadri

ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ಸಾನ್ವಿತ ಎ ಶೆಟ್ಟಿ ಚೆಸ್‌ನಲ್ಲಿ ಅಮೋಘ ಸಾಧನೆ - ರಾಷ್ಟ್ರ ಮಟ್ಟಕ್ಕೆ ಆಯ್ಕೆ

ತೀರ್ಥಹಳ್ಳಿ: ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿತ ಎ ಶೆಟ್ಟಿ, ಸೈಂಟ್ ಜೋಸೆಪ್ ಸ್ಕೂಲ್ ಮತ್ತು ಚದುರಂಗದಾಟಗಾರರ ಸಂಸ್ಥೆ, ಭದ್ರಾವತಿ ಇವರು ಆಯೋಜಿಸಿದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯ ಮುಕ್ತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು
ಶಾಲೆಗೆ ಕೀರ್ತಿ ತಂದಿರುತ್ತಾಳೆ.
ತುಮಕೂರಿನಲ್ಲಿ ಜಿಲ್ಲಾ ಚೆಸ್ ಅಸೋಸಿಯೇಶನ್ ಇವರು ಆಯೋಜಿಸಿದ ಕರ್ನಾಟಕ ರಾಜ್ಯ ಚೆಸ್ ಚಾಂಪಿಯನ್ ಶಿಪ್ -2025 ಸ್ಪರ್ಧೆಯಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನ ಪಡೆದು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿರುತ್ತಾಳೆ.
ಈ ಪ್ರತಿಭಾವಂತ ವಿದ್ಯಾರ್ಥಿನಿಯನ್ನು ಶಾಲಾ ಅಡಳತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.


Previous Post Next Post