ನನ್ನ ಗಿಡ ನನ್ನ ಜವಾಬ್ದಾರಿ ಎಂದ ಸಹ್ಯಾದ್ರಿ ಸಂಸ್ಥೆಯ ವಿದ್ಯಾರ್ಥಿಗಳು Sahyadri

ನನ್ನ ಗಿಡ ನನ್ನ ಜವಾಬ್ದಾರಿ ಎಂದ ಸಹ್ಯಾದ್ರಿ ಸಂಸ್ಥೆಯ ವಿದ್ಯಾರ್ಥಿಗಳು 

ಸಾಲುಮರದ ತಿಮ್ಮಕ್ಕನವರ ಸ್ಮರಣಾರ್ಥವಾಗಿ ಗಿಡ ನೆಟ್ಟ ವಿದ್ಯಾರ್ಥಿಗಳು - ಮಾದರಿ ಹೆಜ್ಜೆ ಇಟ್ಟ ಸಹ್ಯಾದ್ರಿ ಸಂಸ್ಥೆ

ತೀರ್ಥಹಳ್ಳಿ : ಸಾಲುಮರದ ತಿಮ್ಮಕ್ಕನವರ ಸ್ಮರಣಾರ್ಥವಾಗಿ ತೀರ್ಥಹಳ್ಳಿಯ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ  ವಿದ್ಯಾರ್ಥಿಗಳು ಕುಶಾವತಿಯ ಉದ್ಯಾನವನದಲ್ಲಿ ಗಿಡವನ್ನು ನೆಡುವ ಮೂಲಕ ನನ್ನ ಗಿಡ ನನ್ನ ಜವಾಬ್ದಾರಿ ಎಂದು ತಿಳಿಸಿ ಪ್ರತಿ ವಾರಕ್ಕೊಮ್ಮೆ ಗಿಡವನ್ನು ಪೋಷಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕುಶಾವತಿಯ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಗುರುರಾಜ್ ಮಾತನಾಡಿ ನಮ್ಮದೇ ಆದ ದಾರಿದೀಪಗಳು, ಅನೇಕ ಮಹನೀಯರುಗಳು, ತಮ್ಮ ತತ್ವ ಸಿದ್ಧಾಂತಗಳ ಅಡಿಯಲ್ಲಿ ಬದುಕಿ ಅದನ್ನು ಮುಂದಿನ ಪೀಳಿಗೆಗೆ ಅನುಷ್ಠಾನಕ್ಕಾಗಿ ನಮ್ಮ ದಾರಿ ದೀಪಗಳಾಗಿ ಹೋಗಿರುತ್ತಾರೆ. ಅದನ್ನು ಅನುಸರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಾಮಾನ್ಯ ಅನಕ್ಷರಸ್ಥ ಮಹಿಳೆ ಎಲ್ಲವನ್ನು ಅತ್ಯಂತ ವ್ಯವಸ್ಥಿತವಾಗಿ, ನಾನು ನೀಡುವ ಐದು ಹತ್ತು ಮರಗಳಿಂದ ಏನಾಗಬಹುದು ಎಂದು ಅಂದುಕೊಂಡಿದ್ದರೆ ಇಂದು ರಸ್ತೆ ಬದಿಯಲ್ಲಿ ವಿಶಾಲವಾದ ಮರಗಳನ್ನು ನೋಡಲು ಆಗುತ್ತಿರಲಿಲ್ಲ. ತನ್ನದೊಂದು ಅಳಿಲುಸೇವೆ ಎಂದುಕೊಂಡು ತನ್ನ ನಿಸ್ವಾರ್ಥ ಮನಸ್ಸಿನ ಮೂಲಕ ಬರಿ ಗಿಡಗಳನ್ನ ನಡೆದೆ ಅದನ್ನ ಮಕ್ಕಳಂತೆ ಸಾಕಿದರು, ಅವರ ನೆಟ್ಟಂತಹ ಗಿಡಗಳು ಮರಗಳಾಗಿ ಇಂದು ಸಾವಿರಾರು ಜನರಿಗೆ ಇವತ್ತಿಗೂ ಸಹ ಉಪಯೋಗವಾಗುತ್ತಿದೆ ಎಂದರು..

ಅಂತಹ ಸಾಲುಮರದ ತಿಮ್ಮಕ್ಕ ಈಗ ನಮ್ಮಂತವರಿಗೆ ಆದರ್ಶವಾಗಿದ್ದಾರೆ. ಮಕ್ಕಳ ದಿನಾಚರಣೆಯನ್ನು ಖುಷಿ ಸಂತೋಷಕ್ಕಾಗಿ ಆಚರಿಸುವ ಬದಲಾಗಿ ಸಮಾಜಕ್ಕೆ ಮಾದರಿಯಾಗುವ ಕೆಲಸವನ್ನು ಮಾಡೋಣ. ಆ ನಿಟ್ಟಿನಲ್ಲಿ ಈ ಉದ್ಯಾನವನದಲ್ಲಿ 50ಕ್ಕೂ ಹೆಚ್ಚು ಗಿಡಗಳನ್ನ ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿಯನ್ನು ತೆಗೆದುಕೊಂಡು ನನ್ನ ಗಿಡ ನನ್ನ ಜವಾಬ್ದಾರಿ ಎಂಬ ಘೋಷ ವಾಕ್ಯದೊಂದಿಗೆ ಗಿಡವನ್ನು ಪೋಷಿಸೋಣ ಎಂದು ತಿಳಿಸಿದರು ..

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು,  ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು..


Previous Post Next Post