ನಾಳೆ ತೀರ್ಥಹಳ್ಳಿಯ ಬಾಳೇಬೈಲಿನ ಸಿದ್ದೇಶ್ವರ ಬೆಟ್ಟದ ಅದ್ದೂರಿ ದೀಪೋತ್ಸವ
ತೀರ್ಥಹಳ್ಳಿ : ಪಟ್ಟಣದ ಪ್ರಸಿದ್ಧ ಐತಿಹಾಸಿಕ ದೇಗುಲವಾಗಿರುವ ಬಾಳೆಬೈಲಿನ ಸಿದ್ದೇಶ್ವರ ಬೆಟ್ಟದಲ್ಲಿ ನಾಳೆ
ಕಾರ್ತಿಕ ದೀಪೋತ್ಸವದ ಪ್ರಯುಕ್ತ 33 ನೇ ವರ್ಷದ
ದೀಪೋತ್ಸವ ಅತ್ಯಂತ ವೈಭವದಿಂದ ನಡೆಯಲಿದೆ.
ಸುಮಾರು 1000 ಅಡಿ ಬೆಟ್ಟದ ಮೇಲಿರುವ ದೇಗುಲಕ್ಕೆ
ಸಾವಿರಾರು ಭಕ್ತರು ಆಗಮಿಸಲಿದ್ದು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.
ಪೂಜೆ, ದೀಪೋತ್ಸವ, ಅನ್ನ ಸಂತರ್ಪಣೆ !
ನಾಳೆ ಸಂಜೆ ಸ್ವಾಮಿಗೆ ರುದ್ರಭಿಷೇಕ, ವಿಶೇಷ ಅಲಂಕಾರ
ನಂತರ ಸಿದ್ದೇಶ್ವರ ಸ್ವಾಮಿಗೆ ಪೂಜೆ, ದೀಪೋತ್ಸವ ನೆಡೆಯಲಿದೆ ಹಾಗೂ ಆರೂಢ ಪ್ರಶ್ನೆಯಲ್ಲಿ ಬಂದಂತೆ ಅಗಸ್ತ್ಯ ಮಹರ್ಷಿಗಳು ತಪಗೈದ ಸ್ಥಳವಾದ್ದರಿಂದ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಅಗಸ್ತ್ಯ ಮಹರ್ಷಿಗಳ ಗುರುಪೀಠ ಪೂಜೆ ನಡೆಯಲಿದೆ. ನಂತರ ಬಂದಿರುವ ಎಲ್ಲಾ ಭಕ್ತಾದಿಗಳಿಗೂ ಅನ್ನ ಸಂತರ್ಪಣೆ ನೆಡೆಯಲಿದೆ. ಆ ನಂತರ ವಿದ್ವಾನ್ ರಾಘವೇಂದ್ರ ಹೆಗ್ಗೋಡು ಮತ್ತು ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ನ. 23 ರ ಸಂಜೆ 6:30ಕ್ಕೆ ಡ್ಯಾನ್ಸ್ ಪ್ಯಾಲೇಸ್ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಸಿದ್ದೇಶ್ವರ ಬೆಟ್ಟದ ತೆಪ್ಪಲಿನಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ.
ನಿಸರ್ಗ ಮಾತೆಯ ಮುಡಿಯಲ್ಲಿರುವ ಸಿದ್ದೇಶ್ವರ ಬೆಟ್ಟದ
ತುದಿಯವರೆಗೆ ಜಗಮಗಿಸುವ ವಿದ್ಯುತ್ ದೀಪಾಲಂಕಾರ, ಸಿಡಿ ಮದ್ದಿನ ಜೇಂಕಾರದೊಂದಿಗೆ ಸ್ವಾಮಿಯ ದೀಪೋತ್ಸವ ವೀಕ್ಷಿಸಿ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಲು ಸಮಿತಿಯವರು ಈ ಮೂಲಕ ಕೋರಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ