ತೀರ್ಥಹಳ್ಳಿಯ ಹೆಗಲತ್ತಿ ಗ್ರಾಮದ ಯುವತಿ ಕಣ್ಮರೆ – ಪತ್ತೆಗೆ ಸಹಕರಿಸಲು ಪೊಲೀಸರ ಮನವಿ
ತೀರ್ಥಹಳ್ಳಿ : ಮನೆಯಿಂದ ಹೊರಹೋದ ಯುವತಿಯೋರ್ವಳು ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ, ತೀರ್ಥಹಳ್ಳಿ ತಾಲೂಕಿನ ಮಾಳೂರು ಗ್ರಾಮದ ಹೆಗಲತ್ತಿಯಲ್ಲಿ ನಡೆದಿದೆ.
ಈ ಕುರಿತಂತೆ ಪೊಲೀಸ್ ಇಲಾಖೆ ನವೆಂಬರ್ 13 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಗುರುಪ್ರಸಾದ್ ಎಂಬುವರ ಪುತ್ರಿ 21 ವರ್ಷದ ನಾಗಶ್ರೀ ನಾಪತ್ತೆಯಾದವರಾಗಿದ್ದಾರೆ. ಅಕ್ಟೋಬರ್ 11 ರಂದು ರಾತ್ರಿ ಮನೆಯಿಂದ ಹೋದವರು ಇಲ್ಲಿಯವರೆಗೂ ಹಿಂದಿರುಗಿಲ್ಲ.
ಚಹರೆ : ಯುವತಿಯು 5 ಅಡಿ ಎತ್ತರ, ದುಂಡುಮುಖ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಮನೆಯಿಂದ ಹೋಗುವಾಗ ಲೈಟ್ ಪಿಂಕ್ ಟೀ ಶರ್ಟ್, ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ಇವರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಮಾಳೂರು ಪೊಲೀಸ್ ಠಾಣೆ ದೂ. ಸಂ. : 08181 - 235142/ 9480803353/ 08181-228310/9480803333/08182-261413/ 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Tags:
ಪೊಲೀಸ್ ಪ್ರಕಟಣೆ