ರಾಷ್ಟ್ರಮಟ್ಟಕ್ಕೆ ಸತತ 2 ನೇ ಬಾರಿ ಆಯ್ಕೆಯಾದ ವಾಗ್ದೇವಿಯ ಪ್ರಥಮ್ ಟಿ ಎನ್ ರಾವ್
ತೀರ್ಥಹಳ್ಳಿ : ದಿನಾಂಕ 06.11.2025 ರಂದು ಶಾಲಾ ಶಿಕ್ಷಣ ಇಲಾಖೆಯ ವತಿಯಂದ ಯಾದಗಿರಿಯಲ್ಲಿನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯಳಗಿನ ಬಾಲಕ-ಬಾಲಕಿಯರ ಚೆಸ್ ಪಂದ್ಯಾವಳಿಯಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಪ್ರಥಮ್ ಟಿ
ಎನ್ ರಾವ್ (9ನೆಯ ತರಗತಿ) ಅತ್ಯುತ್ತಮವಾಗಿ ಆಟವನ್ನು ಪ್ರದರ್ಶಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ
ಓದುತ್ತಿರುವ ಶಾಲೆಗೆ, ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾನೆ.
ಪ್ರಥಮ್ ಸತತ ಎರಡನೇ ಬಾರಿ ರಾಷ್ಟ್ರಮಟ್ಟವನ್ನು ಪ್ರವೇಶಿಸುತ್ತಿರುವುದು ಸಮಸ್ತ ಜನರಲ್ಲಿ ಇನ್ನೂ ಹೆಚ್ಚಿನ ಸಂತೋಷ ಉಂಟು ಮಾಡಿದೆ. ಅತ್ಯಂತ ಪ್ರತಿಭಾನ್ವಿತನಾದ ಇವನು ಎಲ್‌ಕೆಜಿಯಿಂದಲೂ ಚೆಸ್ ನಿರಂತರವಾಗಿ ಕಲಿಯುತ್ತಿದ್ದಾನೆ. ಈ ವಿದ್ಯಾರ್ಥಿಯು ರಥಬೀದಿಯ ರೂಪ ನಟರಾಜ ದಂಪತಿಗಳ ಪುತ್ರನಾಗಿದ್ದಾನೆ. ರಾಷ್ಟ್ರಮಟ್ಟದ ಕ್ರೀಡೆಯು ನವೆಂಬರ್ 26ರಂದು ತ್ರಿಪುರದಲ್ಲಿ ನಡೆಯಲಿದೆ..
ಇವನ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕ ವೃಂದದವರು ಮತ್ತು ಪೋಷಕರು ಅಭಿನಂದಿಸಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಸಹ ಚಿನ್ನದ ಪದಕವನ್ನು ಪಡೆಯಲಿ ಎಂದು ಶುಭ ಹಾರೈಸಿರುತ್ತಾರೆ.
Tags:
ವಾಗ್ದೇವಿ ಸಂಸ್ಥೆ